ಗಂಗಾವತಿ

ಸಿ.ಬಿ.ಎಸ್‌.ಇ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಅಮೋಘ ಸಾಧನೆ

ಸಿ.ಬಿ.ಎಸ್‌.ಇ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಅಮೋಘ ಸಾಧನೆ

ಗಂಗಾವತಿ 24: ಶ್ರೀರಾಮನಗರದ  ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕಲಬುರ್ಗಿಯಲ್ಲಿ ನಡೆದ ಸಿ.ಬಿ.ಎಸ್‌.ಇ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶ್ರೇಷ್ಠ ಪ್ರದರ್ಶನವನ್ನು ಗೈದಿದ್ದಾರೆ.  

19 ವರ್ಷದೊಳಗಿನ ಬಾಲಕರ ವಾಲಿಬಾಲ್ ವಿಭಾಗ ಹಾಗೂ 17 ವರ್ಷದೊಳಗಿನ ಬಾಲಕಿಯ ವಾಲಿಬಾಲ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನವನ್ನು ತೋರಿ ಕಂಚಿನ ಪದಕವನ್ನು ಪಡೆದಿದ್ದಾರೆ.ಅತ್ಯುತ್ತಮ ಪ್ರದರ್ಶನವನ್ನು ನೀಡಿ ಶ್ರೇಷ್ಠ ಸಾಧನೆಗೈದ ಈ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ನೆಕ್ಕಂಟಿ ಸೂರಿಬಾಬು ಅವರು ಅಭಿನಂದಿಸಿದರು.ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅವುಗಳ ಸಮರ​‍್ಕ ಪ್ರಯೋಜನವನ್ನು ಪಡೆಯುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಅತ್ಯುನ್ನತ ಸಾಧನೆಗೈಯುವಂತೆ ಪ್ರೋತ್ಸಾಹಿಸಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ನೆಕ್ಕಂಟಿ ಆದರ್ಶ, ಆಡಳಿತ ನಿರ್ದೇಶಕರಾದ ಹೆಚ್‌.ಕೆ ಚಂದ್ರಮೋಹನ್, ಶಾಲೆಯ ಸಿ.ಇ.ಓ ನರೇಶ, ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಶ್ರೀಮತಿ ಕೃಷ್ಣವೇಣಿ ಎಸ್, ಕ್ಯಾಂಪಸ್ ಮ್ಯಾನೇಜರ್ ನಾಗೇಶ, ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ವಿಜೇತರಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. 


ಸುದ್ದಿ ಓದಿ