ಗೋಕಾಕ್

ಪ್ರತಿಯೊಬ್ಬರಲ್ಲಿಯೂ ದೇಶ ಪ್ರೇಮವಿರಬೇಕು: ಲಕ್ಕಪ್ಪ ಮೆಳೆಣ್ಣವರ

ಪ್ರತಿಯೊಬ್ಬರಲ್ಲಿಯೂ ದೇಶ ಪ್ರೇಮವಿರಬೇಕು: ಲಕ್ಕಪ್ಪ ಮೆಳೆಣ್ಣವರ

ಬೆಟಗೇರಿ 23:ನೇಗಿಲಯೋಗಿ ಮತ್ತು ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ, ದೇಶ ಸೇವೆ ಮಾಡಿದರೆ ಈಶ್ವರನ ಸೇವೆ ಮಾಡಿದಂತೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಅಧ್ಯಕ್ಷ ಲಕ್ಕಪ್ಪ ಮೆಳೆಣ್ಣವರ ಹೇಳಿದರು. 

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀರಾಮ ಶಂಕರ ಚಂದರಗಿ ಅವರು ಭಾರತೀಯ   ಸೇನೆಯಲ್ಲಿ ಲೆಪ್ಟಿನೆಂಟ್‌ಯಾಗಿ ಆಯ್ಕೆಯಾದ ಪ್ರಯುಕ್ತ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ವತಿಯಿಂದ ಮಾ.23ರಂದು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ದೇಶ ಪ್ರೇಮವಿರಬೇಕು ಎಂದರು.   

ಬೆಳಗಾವಿ ಪ.ಪೂ.ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಈರ​‍್ಪ ದೇಯಣ್ಣವರ, ಮುಂಡಗೋಡದ ವಿಶ್ರಾಂತ ಉಪನ್ಯಾಸಕ ಅರ್ಜುನ ಹೊಂಗಲ, ಸ್ಥಳೀಯ ನಿವೃತ್ತ ಗ್ರಾಮಲೆಕ್ಕಗ ಪಿ.ಕೆ.ನೀಲಣ್ಣವರ, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಸ್ಥಳೀಯ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಗೌರವ ಕಾರ್ಯದರ್ಶಿ ನಾಗಪ್ಪ ಮುರಗೋಡ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆ, ದೇಶ ಪ್ರೇಮ ಹಾಗೂ ಶ್ರೀರಾಮ ಚಂದರಗಿ ಕುರಿತು ಮಾತನಾಡಿದರು. 

ಬೆಟಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ಚಂದರಗಿ ಅವರ ಭವ್ಯ ಮೆರವಣಿಗೆ ನಡೆದ ಬಳಿಕ ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳ ಗಣ್ಯರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್‌ಯಾಗಿ ಆಯ್ಕೆಯಾದ ಶ್ರೀರಾಮ ಶಂಕರ ಚಂದರಗಿ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು. 

ರಾಮಚಂದ್ರ ಬಡಿಗೇರ, ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಶಂಕರ ಚಂದರಗಿ, ಯಮನಪ್ಪ ಹೊರಟ್ಟಿ, ಮುತ್ತೆಪ್ಪ ನೀಲನ್ನವರ, ಶಂಕರ ತೊಂಡಿಕಟ್ಟಿ, ಅಶೋಕ ಚಂದರಗಿ, ಈರಣ್ಣ ಬಳಿಗಾರ, ರಾಮಪ್ಪ ನೀಲಣ್ಣವರ, ಮಹಾದೇವ ಹಾದಿಮನಿ, ಈಶ್ವರ ಬಳಿಗಾರ, ಈರಣ್ಣ ಸಿದ್ನಾಳ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಗಣ್ಯರು, ಮುಖಂಡರು, ಹಿರಿಯ ನಾಗರಿಕರು, ವಿವಿಧ ಸಂಘ, ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಯುವಕರು, ಇತರರು ಇದ್ದರು. 

ಸುದ್ದಿ ಓದಿ