ಜಮಖಂಡಿ

ಪ್ರತಿಯೊಬ್ಬರೂ ದಾನ-ಧರ್ಮ ಮಾಡುವ ಮನೋಭಾವನೆ ಪ್ರವೃತ್ತಿ ಬೆಳೆಸಿಕೊಳ್ಳಬೇಕು: ಹುಲ್ಲೋಳ್ಳಿ

ಪ್ರತಿಯೊಬ್ಬರೂ ದಾನ-ಧರ್ಮ ಮಾಡುವ ಮನೋಭಾವನೆ ಪ್ರವೃತ್ತಿ ಬೆಳೆಸಿಕೊಳ್ಳಬೇಕು:  ಹುಲ್ಲೋಳ್ಳಿ

ಲೋಕದರ್ಶನ ವರದಿ,

ಜಮಖಂಡಿ  5: ಪ್ರತಿಯೊಬ್ಬರೂ ದಾನ-ಧರ್ಮ ಮಾಡುವ ಮನೋಭಾವನೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ದೇವರಲ್ಲಿ ಶ್ರದ್ಧಾ-ಭಾವನೆಯಿಂದ ಧ್ಯಾನ-ಯೋಗದಿಂದ ದಿನವನ್ನು ಪ್ರಾರಂಭಿಸಿ, ಜೀವನವನ್ನು ಉಜ್ವಲವನ್ನಾಗಿಸಿಕೊಳ್ಳಬೇಕು ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದು ಹುಲ್ಲೋಳ್ಳಿ ಕರೆ ನೀಡಿದರು.

ನಗರದ ಸರ್ಕಾರಿ ನೌಕರರ ಜೈನ ಕ್ಷೇಮಾಭಿವೃದ್ದಿ ಸಮಿತಿ ಹಾಗೂ ಜೈನ ಸಮಾಜ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಪಾಲಕರು ತಮ್ಮ ಮಕ್ಕಳನ್ನು ಸ್ನೇಹಿತರಂತೆ ನಡೆಸಿಕೊಳ್ಳಬೇಕು. ಅವರ ಬೇಕು-ಬೇಡಿಕೆಗಳನ್ನು ಈಡೆರಿಸಿ, ಅವರಿಗೆ ಉತ್ತಮ ಸಂಸ್ಕಾರ-ಸಂಸ್ಕೃತಿ ನೀಡುವುದು ಅವಶ್ಯವಾಗಿದೆ. ಇಂದು ನಾವೂ ಮಕ್ಕಳಿಗೆ ಒಳ್ಳೆಯ ಕನಸು-ಆಸೆಗಳನ್ನು ಬಿತ್ತಬೇಕಾಗಿದೆ. ನಾವೂ ನಡೆಸುವ ಪ್ರತಿಯೊಂದು ಕಾರ್ಯಕ್ಕೆ ಯೋಗಾಯೋಗಬೇಕು. ಎಲ್ಲವನ್ನು ಕಾಲ ನಿರ್ಣಯಿಸುತ್ತದೆ. ನಾವೆಲ್ಲರೂ ನೀಡುವ ದಾನ ಸಾರ್ಥಕ ಕಾರ್ಯಕ್ಕೆ ನಿಯೋಜನೆಯಾಗಬೇಕು.ಆಗ ಮಾತ್ರ ದಾನ ನೀಡಿದ್ದು ಸಾರ್ಥಕವಾಗುತ್ತದೆ ಎಂದರು. 

ಅತಿಥಿಗಳಾಗಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ದಯಾನಂದ ಶಿರಗಾರ, ವಕೀಲ ಚಂದ್ರಕಾಂತ ಉಪಾಧ್ಯೆ ಮಾತನಾಡಿದರು.

ಡಾ.ಸಿದ್ದು ಹುಲ್ಲೋಳ್ಳಿ ಅವರ 43 ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.  ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು. ಸಂತೋಷ ಜೈನ, ಅಣ್ಣಪ್ಪ ಶಿರಹಟ್ಟಿ, ನೇಮಿನಾಥ ಪಾಟೀಲ, ಮನಸೂಕ್ ಭಂಡಾರಿ, ಅಣ್ಣಪ್ಪ ಪಡ್ನಾಡ, ಮಂಜು ದೇಸಾಯಿ, ಮಹಾವೀರ ಭಂಡಾರಿ, ಮಾದಪ್ಪ ಕೋರಿ ವೇದಿಕೆಯಲ್ಲಿದ್ದರು. 

ಭಾವನಾ ಬೆಳಗಲಿ ಪ್ರಾರ್ಥಿಸಿದರು, ಶ್ರೀಕಾಂತ ದೇಸಾಯಿ ಸ್ವಾಗತಿಸಿದರು,  ಟಿ.ಎಸ್, ಉಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವೀರ ಜಮಖಂಡಿ ನಿರೂಪಿಸಿದರು. ಬಸವರಾಜ ಆಲಗೂರ ವಂದಿಸಿದರು. 

 

ಸುದ್ದಿ ಓದಿ