ತಾಳಿಕೋಟಿ

ನಿಸರ್ಗದ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಕಾಣಿಕೆ ನೀಡಿ: ಪಾಟೀಲ

ನಿಸರ್ಗದ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಕಾಣಿಕೆ ನೀಡಿ:  ಪಾಟೀಲ

ತಾಳಿಕೋಟೆ22: ಪರಿಸರದ  ಅವಶ್ಯಕತೆ ಎಷ್ಟಿದೆಯೆಂಬುದು ನಮಗೆಲ್ಲ ಈಗ ವೇದ್ಯವಾಗಿದೆ. ಶಿಕ್ಷಣದ ನೀತಿಯೇ ನಿಸರ್ಗದ ಸ್ನೇಹತ್ವವಾಗಿದೆ. ನಿಸರ್ಗದ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಕಾಣಿಕೆ ನೀಡಲೇಬೇಕು. ಹಸಿರು ಸಂಪದ ಬಳಗ ಕಳೆದ ಐದು ವರ್ಷಗಳಿಂದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ಇಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಹುಟ್ಟು ಹಬ್ಬದಂದು ಪಟ್ಟಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿ ನಿವೃತ್ತ ಪ್ರಾಚಾರ್ಯ, ಸಾಹಿತಿ ಪ್ರೊ.ಬಿ.ಆರ್‌.ಪೊಲೀಸ್ ಪಾಟೀಲ ಹೇಳಿದರು. 

 ಪಟ್ಟಣದ ಎಸ್‌.ಕೆ.ಪದವಿ ಪೂವ್ ಕಾಲೇಜಿನ ಮುಂಬಾಗದಲ್ಲಿ ಹಸಿರು ಸಂಪದ ಬಳಗ, ಕೆಬಿಜೆಎನ್‌ಎಲ್ ಅರಣ್ಯ ವಿಭಾಗ, ನಡಹಳ್ಳಿ ಅಬಿಮಾನಿ ಬಳಗದ ಸಹಯೋಗದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಹುಟ್ಟು ಹಬ್ಬ ಅಂಗವಾಗಿ ರಸ್ತೆ ಬದಿಯಲ್ಲಿ 2500 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.  

ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಕಳೆದೆರಡು ವರ್ಷಗಳಲ್ಲಿ ಕೊರೊನಾ ನಮಗೆ ತೋರಿದೆ. ಪರಿಸರ ಮರೆತರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದರ ಸಾಕ್ಷೀಕರಣವಾಗಿದ್ದು ಇನ್ನಾದರೂ ಎಚ್ಚೆತ್ತುಕೊಳ್ಳೋಣ ಎಂದರು. 

ಶಾಸಕರ ಹುಟ್ಟು ಹಬ್ಬ ನಿಮಿತ್ಯ. ಹಸಿರು ಸಂಪದ ಬಳಗ, ನಡಹಳ್ಳಿ ಅಭಿಮಾನಿ ಬಳಗ, ಕೆಬಿಜೆನೆಎಲ್ ಅರಣ್ಯ ವಿಭಾಗ ಸಹಯೋಗದೊಂದಿಗೆ  ತಾಳಿಕೋಟಿ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ಸುಮಾರು 2500 ಸಿಸಿಗಳನ್ನು ನೆಡುವ ಕಾರ್ಯಕ್ಕೆ ಇಂದು ಸ್ಥಳಿಯ ಮುಖಂಡರು, ವಿದ್ಯಾರ್ಥಿಗಳು, ಅಧಿಕಾರಿಗಳು ,ಅಭಿಮಾನಿಗಳು, ಚಾಲನೆ ನೀಡಿದರು. 

ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿ.ಎಸ್‌.ಕಾರ್ಚಿ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಜೈಸಿಂಗ ಮೂಲಿಮನಿ, ಮುದಕಣ್ಣ ಬಡಿಗೇರ, ನಿಂಗಣ್ಣ ಕುಂಟೋಜಿ, ಶರಣು ಗೊಟಗುಣಕಿ, ಪ್ರಮುಖರಾದ ಎಂ.ಎಸ್‌.ಸರಶೆಟ್ಟಿ, ರಾಜಣ್ಣ ಸೊಂಡೂರ, ಕೆ.ಕೆ.ರಂಗರೇಜ್, ಶಿವಶಂಕರ ಹಿರೇಮಠ, ಬಾಬು ಹಜೇರಿ, ವಿ.ಡಿ.ಬಿದರಕುಂದಿ, ಬಾಬು ಕಾರಜೊಳ, ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ, ಉಪಪ್ರಾಚಾರ್ಯ ಎಸ್‌.ಡಿ.ಕರಜಗಿ, ಹಸಿರು ಸಂಪದ ಬಳಗದ ಸಂಚಾಲಕ ಎಸ್‌.ಎಸ್‌.ಗಡೇದ, ಪ್ರಶಾಂತ ಜನಾದ್ರಿ, ಕಲ್ಲಪ್ಪ ಬುಜರಿ, ಈಶ್ವರ ಹೂಗಾರ, ಸಂತೋಷ ಕುಲಕರ್ಣಿ ಸೇರಿದಂತೆ ಇತರರು ಇದ್ದರು. 

ವಿಷೇಶ ಪೂಜೆ :- ಮುದ್ದೇಬಿಹಾಳ ಶಾಸಕ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿರುವ ಆಂನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಶಾಸಕ ಅಭಿಮಾನಿಗಳು, ಪುರಸಭೆ ಸದಸ್ಯರಿಂದ ನಡಹಳ್ಳಿ ಅವರ ಆರೋಗ್ಯ, ಆಯುಷ್ಯ ಹೆಚ್ಚಲೆಂದು ಪ್ರಾರ್ಥಿಸಲಾಯಿತು. ನಂತರ ಸಮುದಾಯ ಆರೊಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನ ವಿತರಣೆ ಮಾಡಲಾಯಿತು. 


ಸುದ್ದಿ ಓದಿ