ತಾಳಿಕೋಟಿ

ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರ ಕೊಡುಗೆ ಇದೆ: ಪಾಟೀಲ

ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರ ಕೊಡುಗೆ ಇದೆ: ಪಾಟೀಲ

ತಾಳಿಕೋಟಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಜಾತಿ-ಜನಾಂಗದವರು ಭಾಗವಹಿಸಿ ತಮ್ಮ ತನು ಮನ ಧನವನ್ನು ಅರ​‍್ಿಸಿದ್ದಾರೆ. ಅಂಥಹ ಎಲ್ಲ ದೇಶ ಭಕ್ತರನ್ನು ಸ್ಮರಿಸುವುದಕ್ಕಾಗಿಯೇ ಕಾಂಗ್ರೆಸ್ ಪಕ್ಷ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಸದಸ್ಯ ಬಿ ಎಸ್ ಪಾಟೀಲ(ಯಾಳಗಿ) ಹೇಳಿದರು. 

ಕಾಂಗ್ರೇಸ್ ನಾಯಕ ರಾಹುಲಗಾಂಧಿ ಅವರ ಮಹತ್ವಾಕಾಂಕ್ಷೆಯ ಭಾರತ ಜೋಡೊ ಪಾದಯಾತ್ರೆಯ ಯಶಸ್ಸಿಗೆ ದೇ.ಹಿಪ್ಪರಗಿ ಮತಕ್ಷೇತ್ರದ ವಡವಡಗಿ ಗ್ರಾಮದಲ್ಲಿ ರಾಷ್ಟ್ರ ಧ್ವಜ ಬೀಸಿ ವಂದೇ ಮಾತರಂ ಭಾರತ ಮಾತಾ ಕಿ ಜೈ ಘೋಷಣೆ ಮೊಳಗಿಸಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. 

ಪಾದಯಾತ್ರೆಯಲ್ಲಿ ಪಾಲಗೊಂಡ ಸುಮಾರು 5ಸಾವಿರ ಜನ ವಂದೇ ಮಾತರಂ ಭಾರತ ಮಾತಾ ಕೀ ಜೈ ಎಂಬ ಘೋಷಣೇ ಕೂಗಿದರು. ಎಲ್ಲರ ಕೈಯಲ್ಲೂ ರಾಷ್ಟ್ರ ಧ್ವಜ ರಾರಾಜಿಸುತ್ತಿದ್ದವು. ವಡವಡಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ಪ್ರಮುಖ ಬೀದಿಗಳ ಮೂಲಕ ಹಾದು ಹುಲಬೆಂಚಿ ನಾಗರಾಳ ಮಧ್ಯದ ಮಾರ್ಗವಾಗಿ ಕು.ಸಾಲವಾಡಗಿಯಿಂದ ಸುಮಾರು 13ಕೀ.ಮೀ ಕ್ರಮಿಸಿ ಹೂವಿನ ಹಿಪ್ಪರಗಿ ತಲುಪಿತು. 

ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಕಾಂಗ್ರೇಸ್ ಮುಖಂಡರಾದ ಸುಭಾಸ ಛಾಯಾಗೋಳ, ಡಾ. ಪ್ರಭುಗೌಡ ಚಬನೂರ, ಆನಂದಗೌಡ ದೊಡಮನಿ, ಸುಜಾತಾ ಕಳ್ಳಿಮನಿ, ಡಾ. ನಂದಕುಮಾರ ಭೈರಿ, ಗೌರಮ್ಮ ಮುತ್ತತ್ತಿ, ಹೂವಿನ ಹಿಪ್ಪರಗಿ-ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷರುಗಳಾದ ಬಾಳನಗೌಡ ಪಾಟೀಲ,ಬಶೀರ ಸೇಠ ಬೇಪಾರಿ, ಸುರೇಶಬಾಬುಗೌಡ ಪೀರಾಪೂರ, ಸುರೇಶಗೌಡ ನಾಡಗೌಡ(ಬಿಂಜಲಭಾವಿ), ಶಿವಾನಂದ ದೇಸಾಯಿ, ಸಿಂದಗಿ ಎಪಿಎಂಸಿ ಮಾಜಿ ಅದ್ಯಕ್ಷ ಹಳ್ಳೆಪ್ಪಗೌಡ ಚೌದ್ರಿ, ವಿಶ್ವನಾಥ ನಾಡಗೌಡ, ಜೈಪಾಲರೆಡ್ಡಿ ನಾಡಗೌಡ(ಶಳ್ಳಗಿ), ಶಿವಕುಮಾರ ದೇಸಾಯಿ, ಬಾಪುಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷರುಗಳಾದ ಸರಿತಾ ನಾಯಕ, ರಮೀಜಾ ನಧಾಫ, ಪಕ್ಷದ ಎಲ್ಲ ಘಟಕದ ಅಧ್ಯಕ್ಷರು ಬಾಗವಹಿಸಿದ್ದರು. 


ಸುದ್ದಿ ಓದಿ