ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ: ಸಣ್ಣಬಾರಕಿ
ಬ್ಯಾಡಗಿ: ಪ್ರಜಾಪ್ರಭುತ್ವ ಎಂದರೆ ಜನರಿಗೆ ಸೇರಿದ, ಜನರಿಗೋಸ್ಕರ, ಜನರೇ ನಡೆಸುವ ಒಂದು ವ್ಯವಸ್ಥೆಯೇ ಪ್ರಜಾಪ್ರಭುತ್ವವೆಂದು ಗ್ರಾಂ.ಪಂ.ಅಧ್ಯೆಕ್ಷೆ ರೂಪಾ ಸಣ್ಣಬಾರಕಿ ಹೇಳಿದರು.
ಅವರು ತಾಲೂಕಿನ ತಡಸ ಗ್ರಾಮ ಪಂಚಾಯತ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಗ್ರಾಮ ಪಂಚಾಯತನ ಎಲ್ಲ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಮತದಾನದ ಕುರಿತು ತಿಳಿವಳಿಕೆ ನೀಡುವ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಅಂಗವಾದ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಿಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದರಲ್ಲದೇ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ. ಈ ಜವಾಬ್ದಾರಿಯನ್ನು ನಾವು ನಿಷ್ಠೆಯಿಂದ ನಿಭಾಯಿಸಬೇಕಿದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿ ಆಯ್ಕೆಗಾಗಿ ತಪ್ಪದೇ ಮತಚಲಾಯಿಸಬೇಕೆಂದರು.ಪಿಡಿಓ ರಹಮತಬಿ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಮತದಾನದ ದಿನ ಅನುಸರಿಸಬೇಕಾದ ಕ್ರಮದ ಬಗ್ಗೆ ಮಾಹಿತಿ ಒದಗಿಸಿ,ಮತ ಚಲಾಯಿಸುವ ಅವಕಾಶವನ್ನು ನಾವೆಂದು ಕಳೆದುಕೊಳ್ಳಬಾರದು. ನಾವು ಕೊಡುವ ಒಂದು ಮತ ಸ್ವಸ್ಥ ಸಮಾಜಕ್ಕೆ ಅಮೂಲ್ಯ ಕೊಡುಗೆ. ಹಾಗೆಯೇ, ಸೂಕ್ತ ವ್ಯಕ್ತಿ ಆರಿಸುವುದು ಅಷ್ಟೇ ಮುಖ್ಯ.ತಪ್ಪದೇ ಮತ ಚಲಾಯಿಸಿ.ಯಾವುದೇಭಯ,ಆಮಿಷಗಳಿಲ್ಲದೇ ಮುಕ್ತವಾಗಿ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ನಿವೆಲ್ಲ ಮತದಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ದಾದಾಪೀರ ಹಳೆಊರ. ಗ್ರಾ.ಪಂ.ಸದಸ್ಯರಾದ ದೀಲಿಪ ಮೇಗಳಮನಿ, ಕರಿಬಸಪ್ಪ ಶಿರಗಂಬಿ, ಮಲ್ಲಿಕಾರ್ಜುನ ಕಾರಗಿ, ಮಲ್ಲಮ್ಮ ಹಂಸಬಾವಿ. ರೇಣಕವ್ವ ಬಣಕಾರ. ನಾರಾಯಣಪ್ಪ ದಾಸರ, ಸಹದೇವಪ್ಪ ತಳವಾರ. ಮುಖಂಡರಾದ ಚಂದ್ರಪ್ಪ ದೊಡ್ಡಮನಿ. ಹೊನ್ನಪ್ಪ ಸಣ್ಣಬಾರ್ಕಿ . ಸುರೇಶ ತಳವಾರ, ಶಬ್ಬೀರ ಹಳೇಊರ. ಸೋಮನಗೌಡ ಬೇಟಗೇರಿ. ಶಿವಮುರ್ತಿಪ್ಪ ಸಣ್ಣಬಾರಕಿ, ಭರಮಪ್ಪ ಹೊನ್ನತ್ತಿ. ದ್ಯಾವಪ್ಪ ಕಾರಗಿ ಸೇರಿದಂತೆ ಇತರರಿದ್ದರು