ಪೋಲಿಯೋ ಅಭಿಯಾನ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ಡಾ. ಶರದ ನಾಯಕ
ಕಾರವಾರ 31: ಪೋಲಿಯೋ ರೋಗ ಐದು ವರ್ಷದ ಒಳಗಿನ ಮಕ್ಕಳಿಗೆ ಬರುವಂತಹ ರೋಗ. ಪ್ರತಿವರ್ಷ ಸರಕಾರ ಎರಡು ಸುತ್ತಿನಲ್ಲಿ ಈ ಪೋಲಿಯೋ ಹನಿಗಳನ್ನು ಮಕ್ಕಳಿಗೆ ಹಾಕಿಸುತಿತ್ತು. ಕಳೆದ ಎರಡು ವರ್ಷಗಳಲ್ಲಿ ಇದನ್ನು ಒಂದೇ ಸುತ್ತಿನಲ್ಲಿ ಹಾಕಲಾಗುತ್ತಿದೆ. ಭಾರತವು 2011 ರಲ್ಲೇ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೆ ನಮ್ಮ ನೆರೆಯ ರಾಷ್ಟ್ರಗಳಾದ ಅಪ್ಘಾನಿಸ್ತಾನ್, ಪಾಕಿಸ್ಥಾನದಲ್ಲಿ ಈ ರೋಗ ಪತ್ತೆಯಾಗಿರವುದರಿಂದ ಯಾವುದೇ ಸಂದರ್ಭದಲ್ಲಿ ಇದು ಹರಡಬಹುದಾದರಿಂದ ಇನ್ನೂವರೆಗೂ ಈ ಅಭಿಯಾನವನ್ನು ಮುಂದುವರೆಸಲಾಗಿದೆ. ಇದರ ಯಶಸ್ವಿಗೆ ಸಂಘ ಸಂಸ್ಥೆಗಳ ಸಹಕಾರ ಅತೀ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶರದ ನಾಯಕ ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರದವರು ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಕ್ಕಳಿಗೆ ಪಲ್ಸ್ ಹನಿಗಳನ್ನು ಹಾಕುತ್ತಾ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭೆ ಕಾರವಾರದ ಉಪಾಧ್ಯಕ್ಷರಾದ ಪ್ರಕಾಶ ನಾಯ್ಕ ಮಾತನಾಡಿ ಸರಕಾರ ಎಷ್ಟುಸಲ ಈ ಅಭಿಯಾನವನ್ನು ಹಮ್ಮಿಕೊಳ್ಳುತ್ತದೆಯೋ ಅಷ್ಟು ಸಲ ನಾವು ಸರಕಾರದ ಜೊತೆ ಕೈ ಜೋಡಿಸಿ ವಿಶ್ವವನ್ನೇ ಪೋಲಿಯೋ ಮುಕ್ತವನ್ನಾಗಿ ಮಾಡಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕರಾದ ಆರ್.ಜಿ.ಪ್ರಭು ಮಾತನಾಡಿ ಜೀವನದ ಈ ಎರಡು ಪೋಲಿಯೋ ಹನಿಗಳು ಐದು ವರ್ಷದ ಒಳಗಿನ ಮಕ್ಕಳಿಗೆ ತಾಯಿಯ ಹಾಲಿಗಿಂತ ಶ್ರೇಷ್ಟವಾಗಿವೆ. ಎಲ್ಲರೂ ತಪ್ಪದೇ ಹಾಕಿಕೊಳ್ಳಬೇಕು. ಇಂದಿನ ಆರೋಗ್ಯವಂತಹ ಮಕ್ಕಳೇ ರಾಷ್ಟ್ರದ ಸಂಪತ್ತಾಗಿವೆ. ಈ ಸಂಪತ್ತನ್ನು ನಾವು ಕಾಪಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ್ ಮಾತನಾಡಿ ಆಝಾದ್ ಯುಥ್ ಕ್ಲಬ್ ಕಾರವಾರದವರು 1995 ರಿಂದ ಆರೋಗ್ಯ ಇಲಾಖೆಯವರ ಸಹಕಾರದೊಂದಿಗೆ ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುತ್ತಾ ಬಂದಿದ್ದು, ಪಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಪೋಲಿಯೋ ರೋಗದ ಜೊತೆಗೆ ಕೊರೋನಾ ವೈರಸ್ಸನ್ನು ಸಹ ನಿರ್ಮೂಲನ ಮಾಡಬೇಕಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಮಾಜ ಸೇವಕ ನಿಝಾಮುದ್ದೀನ್ ಶೇಖ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಭಾರತೀಯ ರೆಡ್ಕ್ರಾಸ್ನ ಸದಸ್ಯೆ ಫೈರೋಜಾ ಬೇಗಂ ಶೇಖ್ ಸ್ವಾಗತಿಸಿದರು. ಕೊನೆಯಲ್ಲಿ ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು. ್ಲ ಆರೋಗ್ಯ ಇಲಾಖೆಯ ಡಾ.ಸುಚೇತಾ, ಗಿರೀಶ ಶೆಟ್ಟಿ, ಕ್ಲಬ್ನ ಮಾಜಿ ಅಧ್ಯಕ್ಷರಾದ ರಿಜ್ವಾನ ಶೇಖ್, ಜಾವೀದ್ ಶೇಖ್, ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಮೊಹಮ್ಮದ್ ಹಸನ್, ಆಯಿಶಾ ಶೇಖ್, ಜಂಟಿ ಕಾರ್ಯದರ್ಶಿ ಫೌಜಿ ಮಿರ್ಜಾನ್ಕರ್, ಶುಹೇಬ್ ಝೈದಿ, ಹಬೀಬುಲ್ ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.