ತಾಳಿಕೋಟಿ

ಪ್ರತಿ ಗ್ರಾಮಕ್ಕೂ ನೀರು ಒದಗಿಸಲು ಬದ್ಧನಾಗಿರುವೆ: ಶಾಸಕ ಸೋಮನಗೌಡ

ಪ್ರತಿ ಗ್ರಾಮಕ್ಕೂ ನೀರು ಒದಗಿಸಲು ಬದ್ಧನಾಗಿರುವೆ: ಶಾಸಕ  ಸೋಮನಗೌಡ


ತಾಳಿಕೋಟಿ: ನನ್ನ ಮತಕ್ಷೇತ್ರದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸುವದರ ಮೂಲಕ ಕ್ಷೇತ್ರದಎಲ್ಲ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡುವುದು ನನ್ನ ಸಂಕಲ್ಪವಾಗಿತ್ತು. ನಾನು ಈ ಮಾತಿಗೆ ಬದ್ಧನಾಗಿದ್ದು ಕೆಲಸ ಮಾಡುತ್ತಿದ್ದೇನೆ ಎಂದುದೇ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು. 

ಇತ್ತೀಚಿಗೆ ಕಲಕೇರಿಗ್ರಾಮದಲ್ಲಿ ಕೃಷ್ಣಾ ಭಾಗ್ಯಜಲ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡ ಮುಳವಾಡ ಏತ ನೀರಾವರಿ ಯೋಜನೆಯ ವಿಜಯಪುರ ಮುಖ್ಯ ಕಾಲುವೆ ಸರಪಳಿ ಕಿ.ಮೀ. 169.760 ರಿಂದ ಕುದರಗುಂಡ ಕೆರೆ ತುಂಬುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಈ ಭಾಗದ ಪ್ರಮುಖ ಕೆರೆಗಳಾದ ಹುಣಶ್ಯಾಳ ಮತ್ತು ಕುದರಗುಂಡ ಕೆರೆಗಳಿಗೆ ಸುಮಾರು ರೂ.10 ಕೋಟಿ ವೆಚ್ಚದ ಕೆರೆ ತುಂಬುವ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ‘ಜಲ-ಜೀವನ್ ಮಿಷನ್(ಜೆಜೆಎಂ) ಮೂಲಕ ಕ್ಷೇತ್ರದ ಸುಮಾರು 70-80 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಯ ಕಾರ್ಯ ನಡೆದಿದೆ. ಅಭಿವೃದ್ಧಿ ನನ್ನ ಮೂಲ ಮಂತ್ರವಾಗಿದೆ. ಕ್ಷೇತ್ರದ ಜನರ ಆಶೀರ್ವಾದ ಹಾಗೂ ಸಹಕಾರ ನನಗಿದ್ದರೆ ಸಾಕು ಎಂದು ತಿಳಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಸಿದ್ದು ಬುಳ್ಳಾ ದಶಕಗಳಿಂದ ಅಭಿವೃದ್ಧಿ ಶೂನ್ಯವಾದ ಈ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಒಯ್ಯುತ್ತಿರುವ ಶಾಸಕ ಸೋಮನಗೌಡರು ಕೊಟ್ಟ ಮಾತಿನಂತೆ ನಡೆಯುವ ಜವಾಬ್ದಾರಿಯುತ ಜನಪ್ರತಿನಿಧಿಯಾಗಿದ್ದಾರೆ ಎಂದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಅವರುಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಸಂಕಲ್ಪದೊಂದಿಗೆ ಶಾಸಕ ಸೋಮನಗೌಡರು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲ ವರ್ಗಗಳಿಗೂ ಸಮಾನವಾಗಿ ನೋಡುವ ಮೂಲಕ ಅವರ ಅಭಿವೃದ್ಧಿಗಾಗಿ ಚಿಂತಿಸುವ ವ್ಯಕ್ತಿ ಅವರಾಗಿದ್ದಾರೆ. ಅವರಿಗೆ ನಮ್ಮ ನಿಮ್ಮೆಲ್ಲರ ಸಹಕಾರದ ಅಗತ್ಯ ಇದೆ ಎಂದರು. 

ಕಲಕೇರಿಗದ್ದುಗೆ ಮಠದ ಪೀಠಾಧಿಪತಿ ಶ್ರೀ.ಷ.ಬ್ರ. ಮಡಿವಾಳೇಶ್ವರ ಶಿವಾಚಾರ್ಯರು ಮಾತನಾಡಿ ಶಾಸಕ ಸೋಮನಗೌಡರು ಸರಳ ಸಜ್ಜನ ರಾಜಕಾರಣಿ ತುಂಬಾ ಮೌನಸ್ವಭಾವದವರಾಗಿದ್ದು, ‘ಮಾತು ಕಡಿಮೆ ಹೆಚ್ಚು ದುಡಿಮೆ’ಯಲ್ಲಿ ನಂಬಿಕೆ ಇಟ್ಟು ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಅವರಿಗೆ ನಮ್ಮ ಆಶೀರ್ವಾದ ಇದೆ ಎಂದರು. 

ಕೆರುಟಗಿ ಹಿರೇಮಠದ ಪೀಠಾಧಿಪತಿ ಶ್ರೀ.ಷ. ಬ್ರ. ಶಿವಬಸವಶಿವಾಚಾರ್ಯ ಸ್ವಾಮಿಗಳು, ಕುದರಗುಂಡದ ಪರಮಪೂಜ್ಯ ಸಿದ್ಧರಾಮೆಶ್ವರ ಸ್ವಾಮಿಗಳು ಶಾಸಕ ಸಹೋದರ ಸಾಹೇಬಗೌಡ ಪಾಟೀಲ, ಪ.ಪಂ.ಸದಸ್ಯರಮೇಶ ಮಸಿಬನಾಳ, ರಾಮನಗೌಡ ನಾವದಗಿ, ಸೋಮನಗೌಡ ಯಾಳವಾರ, ಪ್ರಕಾಶ ಯರನಾಳ, ಅಪ್ಪುದೇಸಾಯಿ, ಪ್ರೇಮಾನಂದ ಮಾಡಗಿ, ಸಂಗಾರೆಡ್ಡಿದೇಸಾಯಿ, ಲಕ್ಕಪ್ಪ ಬಡಿಗೇರ, ಅನೀಲ ಬಡಿಗೇರ, ಕುಮಾರದೇಸಾಯಿ, ಸಿಂದಗಿ ಎಪಿಎಂಸಿ ಉಪಾಧ್ಯಕ್ಷ ಪ್ರಕಾಶ ಪಡಶಟ್ಟಿ,ಕೆಬಿಜೆಎನ್‌ಎಲ್ ಎಇಇ ಶೇಗುಣಸಿ, ಸೂರ್ಯಕನ್ಸಟ್ರೇಕ್ಷನ್ ಮುಖ್ಯಸ್ಥ ಪವನ್, ಟೀಪು ಸಿಪಾಯಿ, ಮೈನುದ್ದೀನ ಬಾಗವಾನ ಇದ್ದರು. 


ಸುದ್ದಿ ಓದಿ