ಕಾರವಾರ

ಪ್ರತಿದಿನ ಯೋಗದಿನ ಆಗಬೇಕು - ಜಿಲ್ಲಾಧಿಕಾರಿ ಮುಗಿಲನ್ ಅಭಿಪ್ರಾಯ

ಪ್ರತಿದಿನ ಯೋಗದಿನ ಆಗಬೇಕು - ಜಿಲ್ಲಾಧಿಕಾರಿ ಮುಗಿಲನ್ ಅಭಿಪ್ರಾಯ

7ನೇ  ಅಂತರರಾಷ್ಟ್ರೀಯ ಯೋಗ ದಿನಾಚರಣೆ; ಆಧುನಿಕತೆಯ ಭರಾಟೆಯಲ್ಲಿ ಯೋಗವನ್ನು ಮರೆತಿದ್ದೆವು ಎಂದು ವಿಷಾಧಿಸಿದ ಶಾಸಕಿ ರೂಪಾಲಿ 

ಕಾರವಾರ 21: ನಮಗೆ ನಾವೇ ಸಮಯ ನಿಗದಿಪಡಿಸಿಕೊಂಡು ಯೋಗಾಭ್ಯಾಸ ಮಾಡುವದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದರೊಂದಿಗೆ ಇತರರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು  ಕುಟುಂಬ  ಕಲ್ಯಾಣ ಇಲಾಖೆಯ ಸಭಾಂಗಣ ದಲ್ಲಿ ಆಚರಿಸಲಾದ  7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಹಿಂದಿನ ಕಾಲದ ಋಷಿ ಮುನಿಗಳಿಂದಲೂ ಚಾಲ್ತಿಯಲ್ಲಿಂದಂತಹ ಯೋಗವನ್ನು   ಆಧುನಿಕತೆಯಲ್ಲಿ ಮರೆತಿದ್ದೆವು.  ಯೋಗಾಭ್ಯಾಸವು ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಉತ್ತಮ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ಯೋಗದಿಂದ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಆರೋಗ್ಯ ಸದೃಢವಾಗಲಿದ್ದು, ಆರೋಗ್ಯವೂ ಕೂಡ ಸುಧಾರಣೆಯಾಗಲಿದೆ. ಅಲ್ಲದೆ ನಮ್ಮ ದೇಹದಲ್ಲಿನ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಲು ಮತ್ತು ಬಂದ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಯೋಗದ ಅಭ್ಯಾಸದಿಂದ ಮಾತ್ರ ಸಾಧ್ಯವಾದ್ದರಿಂದ ಯೋಗಾಭ್ಯಾಕ್ಕೆ ಮೊರೆ ಹೊಗಬೇಕು.   ಯೋಗದ ಅಭ್ಯಾಸ ಕ್ರಮದಿಂದ ಮನಸ್ಸಿನ ನಿಯಂತ್ರಣವನ್ನು  ನಿಯಂತ್ರಿಸಬಹುದಾಗಿದೆ ಎಂದರು. ವ್ಯಕ್ತಿಗೆ ಬೇಕಾದ ಮಾನಸಿಕ ಸ್ಥೈರ್ಯವನ್ನ  ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಯೋಗದಿಂದ ಸಾಧ್ಯ . ಪ್ರತಿದಿನ ಯೋಗದಿನ ಆಗಬೇಕು ಎಂದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ  ಮಾತನಾಡಿ ಈಗಿನ ಕರೋನಾ ಸನ್ನಿವೇಶದಲ್ಲಿ  ಜನರು ದೈಹಿಕ ಆರೋಗ್ಯದ ಸಮಸ್ಯೆ ಜೊತೆಗೆ, ಮಾನಸಿಕ ಆರೋಗ್ಯದ ಸಮಸ್ಯೆಗೂ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ತಜ್ಞರ ಕೊರತೆ ಇರುವುರಿಂದ, ಯೋಗಾಭ್ಯಾಸ ಅನುಸರಿಸಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.  

ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು  ಯೋಗ ವೈದ್ಯರಾದ  ಡಾ. ಪ್ರಕಾಶ ಯಾಜಿ ಅವರು ಸುಮಾರು 45 ನಿಮಿಷಗಳ ಕಾಲ ಯೋಗಾಸನ ನಡೆಸಿಕೊಟ್ಟರು.ಆಯುಷ್ ಮಂತ್ರಾಲಯ , ಆಯುಷ್ ಇಲಾಖೆ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ  ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,   ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ,  ನೆಹರು ಯುವ ಕೇಂದ್ರ  ಇವರ ಸಂಯುಕ್ತ  ಆಶ್ರಯ ದಲ್ಲಿ ಯೋಗದಿನ ಏರ​‍್ಪಟಟಿತ್ತು. ಕೋವಿಡ್ ಸನ್ನಿವೇಶದ  ಹಿನ್ನಲೆಯಲ್ಲಿ ಈ ಬಾರಿಯ  ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಮನೆಯಲ್ಲಿಯೇ ಇರಿ, ಮನೆಯಲ್ಲಿಯೇ ಯೋಗ ಮಾಡಿ”  ಎಂಬ ಘೋಷವಾಕ್ಯದೊಂದಿಗೆ ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ ಲಲಿತಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ ನಾಯಕ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮೀರಾ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.  

ಸುದ್ದಿ ಓದಿ