ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯದಿಂದ ವಂಚಿತ
ರಾಣೆಬೆನ್ನೂರು 28: ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಸಹ ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಸಮರ್ಕವಾಗಿ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ವಿದ್ಯಾರ್ಥಿಗಳು ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ, ಬಸವರಾಜ ಭೋವಿ ಹೇಳಿದರು. ಅವರು ಶನಿವಾರ ಇಲ್ಲಿನ ಸಂಜೀವಿನಿ ಕಾಲೇಜು ಎದುರುಗಡೆ ಇರುವ ವಿದ್ಯಾರ್ಥಿ ಜನಸಂಖ್ಯೆಗನುಗುಣವಾಗಿ, ವಸತಿನಿಲಯಗಳ ಸಂಖ್ಯೆ ಹೆಚ್ಚಿಸಿ ಅರ್ಜಿ ಹಾಕಿದ ಎಲ್ಲರಿಗೂ ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ, ಪ್ರತಿಭಟಿಸಿ ಮಾತನಾಡಿದರು. ಹಾವೇರಿ ಜಿಲ್ಲೆ ಕೇಂದ್ರಸ್ಥಾನವಾಗಿ 25 ವರ್ಷಗಳು ಕಳೆದವು ಆದರೆ ಜಿಲ್ಲೆಯೂ ಸೇರಿದಂತೆ ವಿದ್ಯಾರ್ಥಿ ಸಮುದಾಯ ನಿತ್ಯವೂ ನೂರಾರು ಸಮಸ್ಯೆಗಳು ಎದುರಿಸುವಂತಾಗಿದೆ ಕೂಡಲೇ ಸರಕಾರ ಇತ್ತಕಡೆ ಗಮನ ಹರಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಜಿಲ್ಲೆಯ ಶಾಸಕರು ಸಂಸದರು ಸಚಿವರು ಇಚ್ಛಾಶಕ್ತಿ ತೋರಿದ್ದರೆ ಇಂದು ವಿದ್ಯಾರ್ಥಿ ಸಮುದಾಯ ಮೂಲಭೂತ ಸೌಲಭ್ಯದಿಂದ ವಂಚಿತರಾಗುತ್ತಿರಲಿಲ್ಲ. ಇನ್ನಾದರೂ ಕಣ್ತೆರೆದು ಕೂಡಲೇ ಕ್ರಮ ಕೈಗೊಂಡು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಇಲ್ಲವಾದರೆ ನಿತ್ಯವೂ ಜಿಲ್ಲೆಯೂ ಸೇರಿದಂತೆ ಎಲ್ಲ ತಾಲೂಕ ಕೇಂದ್ರಗಳಲ್ಲಿ ಎಸ್‌ಎಫ್‌ಐ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಈ ಹಿಂದೆ ಮುಖ್ಯಮಂತ್ರಿಗಳು ಮತ್ತು ಸಚಿವರು ಸೇರಿ ಹೆಚ್ಚುವರಿ ಹಾಸ್ಟೆಲ್ಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದರು.
ಭರವಸೆ ಈಡೇರದೆ ಕೇವಲ ಭರವಸೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ವಿದ್ಯಾರ್ಥಿಗಳು ಅನುಗುಣವಾಗಿ, ವಸತಿ ನಿಲಯಗಳನ್ನು ಸ್ಥಾಪಿಸಿದ್ದರು. ಪ್ರಸ್ತುತ ಸರ್ಕಾರ ಅರ್ಜಿ ಹಾಕಿದ ಎಲ್ಲರಿಗೂ ವಸತಿ ಸೌಕರ್ಯಗಳನ್ನು ಕಲ್ಪಿಸುವುದಾಗಿ ಹೇಳುತ್ತಲೇ ಬಂದಿದ್ದಾರೆ ಆದರೆ ಇದುವರೆಗೂ, ಸಾಕಾರವಾಗಿಲ್ಲ. ಮುಖ್ಯಮಂತ್ರಿಗಳು ಹುಸಿ ಭರವಸೆ ನೀಡುವುದು ಬೇಡ ಕೂಡಲೇ ಹಾಸ್ಟೆಲ್ ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ತಾಲೂಕ ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಜಿಲ್ಲಾ ಮುಖಂಡ ಅರುಣ್ ಕಡಕೋಳ, ಉಪಾಧ್ಯಕ್ಷ ಹೂನ್ನಪ್ಪ ಕುದುರಿಹಾಳ್, ಅನಿತಾ ಲಮಾಣಿ ಮತ್ತಿತರರು ಮಾತನಾಡಿದರು. ಮುಂಚೂಣಿಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರಾದ, ಅಂಬಿಕಾ ಎಸ್, ದೀಪಾ ಡಿ.ಆರ್., ಕವಿತಾ ಹೆಚ್, ಜ್ಯೋತಿ ಡಿ, ಭೀಮವ್ವ, ಮೈಲಾರಿ, ರಾಜೇಶ್ ಎಂ.ಆಪುಟ್ಟರಾಜು, ಲೋಕೇಶ್, ದೀಲೀಪ್, ವಿಜಯಕುಮಾರ್, ಗುಡ್ಡೆಶ್, ಬೀರ್ಪ, ಮಾಲತೇಶ್, ಸೇರಿದಂತೆ ವಿವಿಧ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.