ಹಾವೇರಿ ಜಿಲ್ಲೆಯಲ್ಲಿ ಕೆಎಮ್ಎಫ್ ಸ್ಥಾಪನೆ
ರೈತ ಸೇನಾ ಕನರ್ಾಟಕ ಸಂಘದ ಹೋರಾಟದ ಪ್ರತಿಫಲ: ವರುಣಗೌಡ್ರ ಪಾಟೀಲ್
ಶಿಗ್ಗಾವಿ 01: ಹಾವೇರಿ ಜಿಲ್ಲೆಯಲ್ಲಿ ಕೆಎಮ್ಎಫ್ ಸ್ಥಾಪನೆ ರೈತ ಸೇನಾ ಕನರ್ಾಟಕ ಸಂಘ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು ಕಳೆದ ವರ್ಷವೂ ಸಹ ಕೃಷಿ ಸಚಿವ ಬಿ ಸಿ ಪಾಟೀಲ್ರುಗೂ ಮನವಿಯನ್ನು ಸಲ್ಲಿಸಲಾಗಿತ್ತು ನಮ್ಮ ಮನವಿಗೆ ಸ್ಪಂದಿಸಿ ಹಾವೇರಿ ಜಿಲ್ಲೆಯಲ್ಲಿ ಕೆಎಮ್ಎಫ್ ಸ್ಥಾಪನೆಗೆ ಅನೂಮೊದನೆ ನೀಡಿದ ಕೃಷಿ ಸಚಿವರಿಗೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ನಮ್ಮ ಸಂಘದ ಪರವಾಗಿ ಅನಂತ ಧನ್ಯವಾದಗಳನ್ನು ಅಪರ್ಿಸುತ್ತೆವೆ ಎಂದು ರೈತ ಸೇನಾ ಕನರ್ಾಟಕ ಜಿಲ್ಲಾಧ್ಯಕ್ಷ ವರುಣಗೌಡ್ರ ಪಾಟೀಲ್ ಹೇಳಿದರು. ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಭಾಗದ ರೈತರಿಗೆ ಅನುಕೂಲವಾಗಲು ಮತ್ತು ಹೈನುಗಾರಿಕೆಯಲ್ಲಿ ಅಭಿವೃದ್ದಿ ಹೊಂದಲು ನಮ್ಮ ಭಾಗದಲ್ಲಿ ಕೆಎಮ್ಎಫ್ ಸ್ಥಾಪನೆ ಅವಶ್ಯವಿತ್ತು ಮತ್ತು ಹಾಲು ಧಾರವಾಡಕ್ಕೆ ಸಾಗಿಸಲು ಸಾರಿಗೆ ಅನುಕೂಲಕರವಾಗಿರಲಿಲ್ಲ, ರೈತರು ಕಷ್ಟ ಪಡುವಂತ ಪರಿಸ್ಥಿರಿ ನಿಮರ್ಾಣವಾಗಿತ್ತು ಇದನ್ನು ಮನಗಂಡ ರೈತ ಸೇನಾ ಕನರ್ಾಟಕ ಸಂಘಟನೆ ಕಳೇದ ವರ್ಷ ಕೃಷಿ ಸಚಿವರಲ್ಲಿ ಮನವಿ ಮಾಡಿತ್ತು ಸಚಿವರಾದ ಬಿ ಸಿ ಪಾಟೀಲ್ರು ಮಾಡಿಕೊಡುವ ಭರಸಭೆ ನೀಡಿದ್ದರು ಅವರು ನುಡಿದಂತೆ ಇಂದು ಹಾವೇರಿ ಜಿಲ್ಲೆಗೆ ಕೆಎಮ್ಎಫ್ ಅನುಮೊದನೆಯಾಗಿದ್ದು ನಮ್ಮ ಸಂಘಟನೆಗೆ ಇನ್ನೂ ಶಕ್ತಿ ಬಂದಂತಾಗಿದೆ ಮತ್ತು ಜಿಲ್ಲೆಯ ರೈತರಲ್ಲಿ ಸಂತಸ ತಂದಿಗೆ ಕೂಡಲೇ ಕೆಲಸ ಪ್ರಾರಂಭವಾಗಿ ರೈತರಿಗೆ ಅನುಕೂಲವಾಗಲಿ ಅನುಮೊದಿಸಿದ ಕೃಷಿ ಸಚಿವರಿಗೆ ಮುಖ್ಯಮಂತ್ರಿಗಳಿಗೆ ರೈತರ ಪರವಾಗಿ ಧನ್ಯವಾದಗಳನ್ನು ಅಪರ್ಿಸುತ್ತೆವೆ ಎಂದರು.