ಎಸ್ಸೆಸ್ಸೆಲ್ಸಿ: ಪಶ್ಚಿಮಕಾಲ್ವಿ ಸಕರ್ಾರಿ ಪ್ರೌಢ ಶಾಲೆಗೆ ಶೇ.98ರಷ್ಟು ಫಲಿತಾಂಶ
ಲೋಕದರ್ಶನ ವರದಿ
ಹೂವಿನಹಡಗಲಿ 21: ತಾಲೂಕಿನ ಪಶ್ವಿಮ ಕಾಲ್ವಿ ತಾಂಡದ ಎಂ.ಬಿ.ಸಿ.ಬಿ ಸಕರ್ಾರಿ ಪ್ರೌಢಶಾಲೆಗೆ 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 98ರಷ್ಟು ದಾಖಲೆ ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ48 ವಿದ್ಯಾಥರ್ಿಗಳ ಪೈಕಿ 47 ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಎಲ್.ಹೇಮಾವತಿ ವಿದ್ಯಾಥರ್ಿ 625ಕ್ಕೆ 602 ಫಲಿತಾಂಶ ಬಂದಿದ್ದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಅತ್ಯುತ್ತಮ ಶ್ರೇಣಿ 13, ಪ್ರಥಮ-32,ದ್ವಿತೀಯ-02 ಉತ್ತೀರ್ಣರಾಗಿದ್ದಾರೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಹಳ್ಳಿಗುಡಿ, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಎಂ.ಉಮೇಶ, ಪದಾಧಿಕಾರಿಗಳು, ಶಾಲೆಯ ಮುಖ್ಯಶಿಕ್ಷಕ ಯು.ಎಂ.ಶಿವಯೋಗಿ ಹಾಗೂ ಸಿಬ್ಬಂದಿ,ಗ್ರಾಮಸ್ಥರು ಅಭಿನಂದಿಸಿದ್ದಾರೆ