ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಬಾಲರಡ್ಡಿ
ಯರಗಟ್ಟಿ 13: ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹಾಗಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ ಹೆಳಿದರು.
ಸಮೀಪದ ತಲ್ಲೂರ ಗ್ರಾಮದ ಪ್ರಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಶನಿವಾರ ಹಮ್ಮೊಕೊಂಡಿದ್ದ ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವದ ಆಜಾದಿಕಾ ಅಮೃತ ಮಹೋತ್ಸವದ ಅಡಿಯಲ್ಲಿ ನನ್ನ ನೇಲ, ನಮ್ಮ ದೇಶ ಕಾರ್ಯಕ್ರಮದ ಅಂಗವಾಗಿ ಸಸಿ ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಅರಣ್ಯ ನಾಶದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಸರಿಯಾಗಿ ಮಳೆಯಾಗದೆ ಜನ ಜಾನುವಾರುಗಳು ಪ್ರಾಣಿ ಪಕ್ಷಿಗಳು ನೀರಿನ ತೋಂದರೆ ಅನುಭವಿಸಬೇಕಾಗುತ್ತದೆ. ಅರಣ್ಯ ನಾಶದಿಂದ ಜೀವ ಸಂಕುಲ ಮತ್ತು ಪ್ರಾಣಿ ಸಂಕುಲ ಅವನತ್ತಿಯಾಗುತ್ತಸಾಗುತ್ತದೆ ಎಂದರು.
ಗ್ರಾ. ಪಂ. ಪಿಡಿಒ ಎ.ಬಿ.ಬಂಗಾರಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರ ಚನ್ನಾಗಿದ್ದರೆ ಮಾತ್ರ ಮನುಷ್ಯ ಉತ್ತಮ ರಿತಿಯಲ್ಲಿ ಬದುಕಲು ಸಾದ್ಯ ಎಂದರು.
ಅರಣ್ಯ ಇಲಾಖೆ ಅಧಿಕಾರಿ ಚಾಮರಾಜ ಮುರಗೋಡ, ಗ್ರಾಪಂ ಸದಸ್ಯ ಸಚೀನ ಹೋಳಿ, ಕಮಲವ್ವ ಶಿವಪೂಜಿ, ವೈದ್ಯಾಧಿಕಾರಿ ಪ್ರಮೊದ ಸಿಂದಗಿ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹೇಶ ಇಟ್ನಾಳ, ವೀರ್ಪ ಬೆನಕಟ್ಟಿ, ಶಂಕರ ಲಮಾಣಿ ಸೇರಿದಂತೆ ಮತ್ತಿತರು ಇದ್ದರು.