ಪರಿಸರ ಸಂರಕ್ಷಣೆ ಮಾಡುವುದು ಮನುಕಲದಿಂದ ಮಾತ್ರ ಸಾಧ್ಯ ಅಧ್ಯಕ್ಷ ಎಸ್ ರಾಘವೇಂದ್ರ
ಲೋಕದರ್ಶನ ವರದಿ
ಕಂಪ್ಲಿ 05 : ಸಸಿ ಮತ್ತು ಗಿಡಮರಗಳನ್ನು ಪಾಲನೆ ಪೋಷಣೆ ಮಾಡುವುದು ಪ್ರತಿಯೊಬ್ಬರ ನಾಗರಿಕನ ಕರ್ತವ್ಯ ಎಂದು ಸೋಮೇಶ್ವರ ವಾಯು ವಿವಾರ ಸಂಘದ ಅಧ್ಯಕ್ಷ ಎಸ್ ರಾಘವೇಂದ್ರ ಹೇಳಿದರು ಪಟ್ಟಣದ ಸೋಮಪ್ಪ ಕರೆ ಅಂಗಳದಲ್ಲಿ ಸೋಮೇಶ್ವರ ವಾಯು ವಿಹಾರ ಸಂಘದಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಅಂಗವಾಗಿ ಸಿಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ ಗಿಡ ಮರಗಳನ್ನು ನಾಶವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಭೂಮಿ ಮತ್ತು ಪರಿಸರ ಮನುಕಲಕ್ಕೆ ಒಳೆಯದನ್ನು ಮಾಡುತ್ತದೆ ಪರಸರ ಸಂರಕ್ಷಣೆ ಮಾಡುವುದು ಮನುಕುಲದಿಂದ ಮಾತ್ರ ಸಾಧ್ಯ ಗಿಡ ಮರಗಳಿಂದ ಉತ್ತಮವಾದ ಮಳೆ ಗಾಳಿ ಇವೇಲ್ಲವು ನಿಸರ್ಗದ ಕೊಡುಗೆಯಾಗಿದೆ ಯುವಕರಿಗೆ ಮತ್ತು ನಾಗರಿಕರಿಗೆ ಪರಿಸರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದರು 50 ಸಸಿಗಳನ್ನು ನೆಟ್ಟು ನೀರುಣಿಸಿದರು ಸೋಮಮೇಶ್ವರ ವಾಯು ವಿಹಾರ ಸಂಘದ ಉಪಾಧ್ಯಕ್ಷ ಜಿ.ಎಂ ಸುರೇಶ ಕಾರ್ಯದರ್ಶಿ ಡಿ ಎಂ ಮಂಜುನಾಥ ಮುಖಂಡರಾದ ಸಜ್ಜನರ ವಿಶ್ವನಾಥ ಡಿ ಈರಣ್ಣ ಗುರುಸ್ವಾಮಿ ಯು ಉಸ್ಮಾನ ವಾಯ್ ಗೋಪಿ ವಿ ಮೃತ್ಯಂಜಯಸ್ವಾಮಿ ವಿ ರಘುನಾಯ್ಕ ಅಬ್ದುಲ್ ಸುನೀಲ್‌ಕುಮಾರ ಎರ್ ಟಿ.ಓ ಬಾಬು ಹೊಗಾರ ರಮೇಶ ಉಳ್ಳಗಡ್ಡಿ ಈರಣ್ಣ ಸಿ ಚನ್ನಪ್ಪ ಸೇರಿ ಅನೇಕರಿದ್ದರು