ಪರಿಸರ ಜಾಗೃತಿ ತಾಲೂಕಾ ಸಮಾವೇಶ
ತಾಳಿಕೋಟೆ21: ಪಟ್ಟಣದ ಹಸಿರು ಸಂಪದ ಬಳಗದ ಸಭೆಯನ್ನು ಹಳೆ ಹುಡ್ಕೊ ಕಾಲನಿಯ ಉದ್ಯಾನದಲ್ಲಿ ಮಂಗಳವಾರ ನಡೆಸಲಾಯಿತು.
ಸುವರ್ಣ ಸ್ವಾತಂತ್ರ್ಯ ಮಹೋತ್ಸವ ವರ್ಷದ ಸಂಭ್ರಮದಲ್ಲಿ ಸುವರ್ಣ ಸ್ವಾತಂತ್ರ-್ಯ ಪರಿಸರ ಜಾಗೃತಿ ತಾಲ್ಲೂಕಾ ಸಮಾವೇಶವನ್ನು ಮೇ.14 ರಂದು ಸಂಜೆ 4 ಗಂಟೆಗೆ ನಡೆಸಲು ತೀರ್ಮಾನಿಸಲಾಯಿತು. ಅಂದಿನ ಸಭೆಯ ಸಾನ್ನಿಧ್ಯವನ್ನು ಖಾಸ್ಗತೇಶ್ವರಮಠದ ಸಿದ್ಧಲಿಂಗ ದೇವರು, ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ ವಹಿಸುವರು. ಕಾರ್ಯಕ್ರಮವನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಉದ್ಘಾಟಿಸುವರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಶ್ರೀಶೈಲ ಹುಕ್ಕೇರಿ ತಿಳಿಸಿದರು. ಸಭೆಗೆ ತಾಲ್ಲೂಕಿನ ಪ್ರತಿ ಗ್ರಾಮಗಳ ಕನಿಷ್ಟ ಇಬ್ಬರು ಪರಿಸರಾಸಕ್ತರು, ಮುಖ್ಯಶಿಕ್ಷಕರು, ಶಿಕ್ಷಕರು, ಗ್ರಾ.ಪಂ.ಪಿಡಿಓಗಳನ್ನು ಆಹ್ವಾನಿಸುವುದು. ತಮ್ಮ ಗ್ರಾಮಗಳಲ್ಲಿ ಕೈಗೊಂಡ, ಕೈಗೊಳ್ಳಬಹುದಾದ ಪರಿಸರ ಚಟುವಟಿಕೆ ಪಟ್ಟಿ ಪಡೆದುಕೊಳ್ಳುವುದು. ಪುರಸಭೆ, ಗ್ರಾಮ ಪಂಚಾಯತಿ, ಅರಣ್ಯ ಇಲಾಖೆ, ಸಂಘಟನೆಗಳು, ದಾನಿಗಳ ಸಹಯೋಗ, ಸಂಯೋಜನೆಯಲ್ಲಿ ಮಾಡಲು ಸಾಧ್ಯವಿರುವ ಕಾರ್ಯಗಳ ಪಟ್ಟಿ. ಕಾರ್ಯಸೂಚಿಯಂತೆ ಒಂದೊಂದಾಗಿ ನೆರವು, ಪ್ರೋತ್ಸಾಹ ನೀಡುವುದು. ಮಳೆಗಾಲದ ಮುನ್ನ ಲಭ್ಯವಿರುವ ಸಸಿಗಳು, ಆವಶ್ಯಕತೆ ಪರೀಶೀಲಿಸಿ ಸರಿದೂಗಿಸಲು (ರಕ್ಷಣೆ ಮಾಡುವ ಜವಾಬ್ದಾರಿ ಹೊರುವವರಿಗೆ ಮಾತ್ರ ) ಸಂಯೋಜಕ ಕೆಲಸ ಮಾಡುವುದು. ಪ್ರತಿ ಗ್ರಾಮಗಳಲ್ಲೂ ಪರಿಸರ ಗುಂಪುಗಳ ನಿರ್ಮಾಣಕ್ಕೆ ಪ್ರೋತ್ಸಾಹ, ಸಹಕಾರ ನೀಡುವುದು. ಪಟ್ಟಣದಲ್ಲಿ ವಿಧಾಯಕ ಕಾರ್ಯಗಳನ್ನು ಪ್ರತಿ ತಿಂಗಳು ನಡೆಸಬೇಕು ಎಂದು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು. ಸಭೆಯಲ್ಲಿ ಪುರಸಭೆಯ ಸದಸ್ಯರಾದ ಪರಶುರಾಮ ತಂಗಡಗಿ, ವಾಸುದೇವ ಹೆಬಸೂರ, ಜಯಸಿಂಗ ಮೂಲಿಮನಿ ಅವರು ಪುರಸಭೆಯಿಂದ ಅಗತ್ಯ ಸಹಕಾರದ ಭರವಸೆ ನೀಡಿದರು. ಸಭೆಯಲ್ಲಿ ಡಾ.ಆನಂದ ಭಟ್ಟ, ಡಾ.ಗುರುರಾಜ ಚಿತ್ತರಗಿ, ಡಾ.ನಜೀರ ಕೋಳ್ಯಾಳ, ರಾಜು ಹಂಚಾಟೆ, ಪಿ.ಎಚ್.ಸುರಪುರ, ಆರ್.ಬಿ.ದಮ್ಮೂರಮಠ, ಶಫಿಕ ಇನಾಮದಾರ, ಎಂ.ಬಿ. ಮಡಿವಾಳರ, ಎನ್.ಎಸ್.ಪೂಜಾರಿ, ರಾಜು ವಿಜಾಪುರ, ಅಶೋಕ ಸಜ್ಜನ, ಬಸವರಾಜ ಪಂಚಗಲ್ಲ, ಗುಂಡುರಾವ ಧನಪಾಲ, ಆರ್.ಎಫ್ ಹಿರೇಮಠ, ಎಚ್..ಬಿ.ಕರೆಕಲ್ಲ, ಸಂಗಮೇಶ ದೇಸಾಯಿ, ಶ್ರೀಶೈಲ ಹೂಗಾರ, ನವೀನಸಿಂಗ ಗೌಡಗೇರಿ, ಎ.ಎಂ.ಮೂಲಿಮನಿ, ಯಲ್ಲಾಲಿಂಗ ಮೇಟಿ, ಯಲ್ಲೇಶ ದಾಯಪುಲೆ, ವಿ.ಎನ್.ಯಾತಗಿರಿ, ರಾಜಣ್ಣ ಸೊಂಡೂರ, ಪಿ.ವಿ.ಜನಾದ್ರಿ, ಸಂಗಮೇಶ ಮದರಕಲ್ಲ, ವಿಶ್ವನಾಥ ಗಣಾಚಾರಿ, ಸಂತೋಷ ಕದಂ, ಕಲ್ಲಪ್ಪ ಬುಜರಿ, ಪ್ರಶಾಂತ ಅಂಬಿಗೇರ, ಸದ್ದಾಂ ಕಕನೋಡಿ, ವೀರೇಶ ಕೋರಿ ಇದ್ದರು. ಎಸ್.ಎಸ್.ಗಡೇದ ಸ್ವಾಗತಿಸಿದರು.