26ರಂದು ಉದ್ಯಮಶೀಲತಾ ಜಾಗೃತಿ ಶಿಬಿರ
ಕಾರವಾರ 20: ಉದ್ಯಮ ಪ್ರಾರಂಭಿಸಲು ಆಸಕ್ತಿಯುಳ್ಳ ಯುವಕ-ಯುವತಿಯರಿಗಾಗಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿಕೇಂದ್ರ(ಸಿಡಾಕ್), ಜನ ಶಿಕ್ಷಣ ಸಂಸ್ಥಾನದಿಂದ ಜುಲೈ26ರಂದು ಮುಂಜಾನೆ 11ಕ್ಕೆ ಶಿರಸಿತಾಲೂಕಿನ ಮಳಗಿಯ ದಿ.ಹನುಮಂತಪ್ಪಾ ತಿಮ್ಮಪ್ಪಾ ಪಾಟೀಲ ಸಮುದಾಯ ಭವನದಲ್ಲಿ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮ ಸ್ಥಾಪಿಸುವುದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ ಉದ್ಯಮಶೀಲರ ಅನುಭವಸೇರಿದಂತೆ ವಿವಿಧ ವಿಷಯಗಳ ಕುರಿತು ತಿಳಿಸಲಾಗುತ್ತಿದೆ.
ಉದ್ಯಮ ಪ್ರಾರಂಭಿಸಲು ಉತ್ಸುಕರಾಗಿರುವ ಯುವಕ/ಯುವತಿಯರು ಶಿಬಿರದಲ್ಲಿ ಭಾಗವಹಿಸಬಹುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆಆದ್ಯತೆ ನೀಡಲಾಗುತ್ತಿದ್ದು, 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು. ಕನಿಷ್ಠ ಓದಲು ಹಾಗೂ ಬರೆಯಲು ಬರುವವರುಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಿಡಾಕ್ನ ಉಪ ನಿರ್ದೇಶಕ ಶಿವಾನಂದ ವೆಂ. ಎಲಿಗಾರ(ಮೋಬೈಲ್ಸಂಖ್ಯೆ: 9448812974) ಹಾಗೂ ತರಬೇತುದಾರ ಶಿವರಾಜ ಹೆಳವಿ(8722708795) ಅವರನ್ನು ಸಂಪರ್ಕಿಸಬಹುದುಎಂದುಸಿಡಾಕ್ನ ಉಪ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.