ತಾಳಿಕೋಟಿ

ಎಂಟು ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಆಂಗ್ಲ ಮಾಧ್ಯಮ: ಬಿಇಓ

ಎಂಟು ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಆಂಗ್ಲ ಮಾಧ್ಯಮ: ಬಿಇಓ
ತಾಳಿಕೋಟೆ ತಾಲೂಕಿನ ಬ.ಸಾಲವಾಡಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಒಂದನೆಯ ತರಗತಿಗೆ ಪ್ರವೇ

ತಾಳಿಕೋಟೆ 06: ತಾಲೂಕಿನಲ್ಲಿ ಆರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಹಾಗೂ ಎರಡು ಉರ್ದು ಮಾಧ್ಯಮದ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಒಂದನೆಯ ತರಗತಿಯಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದ್ದು ಪಾಲಕರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ ಹೇಳಿದರು. 

ಅವರು ತಾಲೂಕಿನ ಬ.ಸಾಲವಾಡಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಒಂದನೆಯ ತರಗತಿಗೆ ಪ್ರವೇಶ ಪ್ರ್ರಕ್ರಿಯೆಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. 

ತಾಲೂಕಿನ ಎಚ್‌.ಪಿ.ಎಸ್‌. ಗೊಟಗುಣಕಿ, ಎಚ್‌.ಪಿ.ಎಸ್ ಕೊಡಗಾನೂರ, ಎಂ.ಪಿ.ಎಸ್‌. ಬ.ಸಾಲವಾಡಗಿ ಎಚ್‌.ಪಿ.ಎಸ್ ಬಳಗಾನೂರ, ಎಚ್‌.ಪಿ.ಎಸ್ ಹಡಲಗೇರಿ, ಎಚ್‌.ಪಿ.ಎಸ್ ಅಡವಿಸೋಮನಾಳ,  ಉರ್ದುಯುಜಿಎಸ್‌. ಮುದ್ದೇಬಿಹಾಳ ಹಾಗೂ ಉರ್ದು ಎಂ.ಪಿ.ಎಸ್‌.ತಾಳಿಕೋಟೆಯಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಪರಿಣಿತರು ಹಾಗೂ ತರಬೇತಾದವರನ್ನು ಈ ವರ್ಗಗಳಿಗೆ ಬೋಧನೆಗೆ ನಿಯೋಜಿಸಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ವರ್ಗಗಳು ಪ್ರಾರಂಭವಾಗುವವರೆಗೆ ಚಂದನ ಒಂದರಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಟಿವಿಯಲ್ಲಿ ಸಂವೇಗ ಪಾಠ ಬೋಧನೆ ಪ್ರಾರಂಭವಾಗಿದ್ದು ಈ ಬಗ್ಗೆ ಯಾವ ಸಮಯಕ್ಕೆ ಯಾವ ತರಗತಿಗೆ ವರ್ಗ ನಡೆಯುತ್ತದೆ ಎಂಬುದನ್ನು ಶಿಕ್ಷಕರು ಪಾಲಕರಿಗೆ ತಿಳುವಳಿಕೆ ನೀಡಬೇಕು. ಶಾಲೆಯಿಂದ ಮಕ್ಕಳು ವಿಮುಖರಾಗದಂತೆ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿರುವಂತೆ ಎಸ್‌.ಡಿ.ಎಂ.ಸಿ, ಪಾಲಕರು ಹಾಗೂ ಶಿಕ್ಷಕರು ಜೊತೆಯಾಗಿ ಕೆಲಸ ನಿರ್ವಹಿಸಬೇಕು ಎಂದರು. 

ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಪಿ.ಎ.ಮುಲ್ಲಾ, ಬಿಆರ​‍್ಿ ಕೆ.ಎಸ್‌.ಸಜ್ಜನ, ಸಿಆರ​‍್ಿ ಆರ್‌.ಎಸ್‌.ಮೂರಮನ, ಮುಖ್ಯಶಿಕ್ಷಕಿ ಆರ್‌.ಸಿ.ಗುಣಕಿ, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಸ್‌.ಎಸ್‌.ಗಡೇದ, ಮುಖ್ಯಶಿಕ್ಷಕ ಡಿ.ಬಿ.ಬಿರಾದಾರ, ಪಾಲಕರಾದ ಪ್ರಭುಗೌಡ ಅನಂತರೆಡ್ಡಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. 

ಸುದ್ದಿ ಓದಿ