ತಾಳಿಕೋಟಿ

ಮೋದಿ ಸರ್ಕಾರದಿಂದ ಲಿಂಬೆ ಬೆಳೆಯುವ ರೈತರಿಗೆ ಪ್ರೋತ್ಸಾಹ: ಅಲ್ಲಾಪೂರ

ಮೋದಿ ಸರ್ಕಾರದಿಂದ ಲಿಂಬೆ ಬೆಳೆಯುವ ರೈತರಿಗೆ ಪ್ರೋತ್ಸಾಹ: ಅಲ್ಲಾಪೂರ


ತಾಳಿಕೋಟೆ20:  ಒಂದು ಜಿಲ್ಲೆ ಒಂದು ಉತ್ಪನ್ನದಡಿಯಲ್ಲಿ ವಿಜಯಪುರ ಜಿಲ್ಲೆಗೆ ಲಿಂಬೆ ಬೆಳೆಯನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಲಿಂಬೆ ರೈತರ ಬಾಳು ಆರ್ಥಿಕವಾಗಿ ಸಬಲಿಕರಣವಾಗಲಿದೆ  ಎಂದು ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು. 

ಪಟ್ಟಣದ ನಿಮಿಷಾಂಭಾ ದೇವಿ ದೇವಸ್ಥಾನದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿ, ನಮ್ಮ ಜಿಲ್ಲೆಯ ಲಿಂಬೆ ಬೆಳೆಯನ್ನು ವಿದೇಶಕ್ಕೆ ರಾ​‍್ತಗುತ್ತಿದೆ. ಆದರೆ ಎಲ್ಲ ಸಂದರ್ಭದಲ್ಲಿ ಉತ್ತಮ ಬೆಲೆ ಇಲ್ಲದಿರುವದರಿಂದ ಹೆಚ್ಚಿನ ರೈತರು ಲಿಂಬೆ ಬೆಳೆಯನ್ನು ಬೆಳೆಯಲು ಮುಂದಾಗುತ್ತಿಲ್ಲ. ಮೋದಿ ಸರಕಾರ ಒಂದು ಜಿಲ್ಲೆ ಒಂದು ಉತ್ಪನ್ನದಡಿಯಲ್ಲಿ ಲಿಂಬೆ ಬೆಳೆಯನ್ನು ಆಯ್ಕೆ ಮಾಡಿಕೊಂಡಿದೆ. ಇದರಿಂದ ಲಿಂಬೆಯ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಉತ್ತೆಜನ ಸಿಗಲಿದೆ. ಈಗಾಗಲೇ ಲಿಂಬೆಗೆ ಜಿಯೋ ಟ್ಯಾಗ ಪಡೆಯುವ ಪ್ರಯತ್ನ ನಡೆಯುತ್ತಿದೆ. ಜಿಯೋ ಟ್ಯಾಗ ಸಿಕ್ಕರೆ ಆನ್‌ಲೈನ್ ಮಾರುಕಟ್ಟೆ ಮಾಡಲು ಸಾಧ್ಯವಾಗಲಿದೆ. ಇದರಿಂದ ಎಲ್ಲ ಸಮಯದಲ್ಲೂ ಮಾರುಕಟ್ಟೆ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಲಿಂಬೆ ಬೆಳೆಯುವ ರೈತರ ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ 23 ಮತ್ತು 24 ರಂದು ವಿಜಯಪುರದ ಕಂದಗಲ್ಲ ರಂಗ ಮಂದಿರದಲ್ಲಿ ಲಿಂಬೆ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನ ನುರಿತ ತಜ್ಞರಿಂದ ಲಿಂಬೆ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆ, ರಫ್ತು ಅವಕಾಶಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. 

ಈಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಮಾತನಾಡಿ, ರೈತ ಸಬಲವಾದರೆ ದೇಶ ಸಬಲವಾದಂತೆ. ರೈತರು ಸಬಲರಾಗಲು ಮೋದಿ ಸರಕಾರ ಕೃಷಿ ಕಾಯಿದೆಗಳನ್ನು ತಂದಿತ್ತು. ಆದರೆ ವಿಪಕ್ಷಗಳ ಪ್ರಚೋದಿತ ಹೋರಾಟದಿಂದ ಕೃಷಿ ಕಾಯಿದೆಗಳನ್ನು ಹಿಂಪಡೆಯಲಾಗಿದೆ. ರೈತರ ಬಾಳನ್ನು ಕಂಗೋಳಿಸಲು ಮೋದಿ ಸರಕಾರ ಹಲವು ಕ್ರಮಗಳನ್ನು ಕೈಕೊಂಡಿದೆ ಎಂದರು. 

ಈ ಸಂದರ್ಭದಲ್ಲಿ ಹಣಮಂತ ಗುಳೆದ, ಮಹಾದೇವಿ ಅಂಬಲಿ, ಬಸವರಾಜ ಸಜ್ಜನ, ತಮ್ಮರ್ಣಣ ದೇಶಪಾಂಡೆ, ರಾಜು ಅಲ್ಲಾಪೂರ, ಶಶಿಧರ ಡಿಸಲೆ, ವೀರಭದ್ರ​‍್ಪ ಸಜ್ಜನ, ಮಲ್ಲಿಕಾರ್ಜುನ ಹಿಪ್ಪರಗಿ ಸೇರಿದಂತೆ ರೈತರು ಇದ್ದರು. 


ಸುದ್ದಿ ಓದಿ