ಶಿಗ್ಗಾವ್

ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ: ಶಾಸಕ ಸಯ್ಯದ್ ಅಜೀಂಪೀರ್

ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ: ಶಾಸಕ ಸಯ್ಯದ್ ಅಜೀಂಪೀರ್

ಶಿಗ್ಗಾವಿ 25: ಹಾವೇರಿ ಜಿಲ್ಲೆ ರಚನೆಯಾಗಿ 25 ವರ್ಷ ತುಂಬಿದೆ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ, ಹಾವೇರಿ ಜಿಲ್ಲೆಯನ್ನು ಮಾಡಿದ ಕೀರ್ತಿ ಅಂದಿನ ಸಿಎಂ ಆಗಿದ್ದ ಜೆ. ಹೆಚ್ ಪಟೇಲರಿಗೆ ಹಾಗೂ ಎಸ್ ಆರ್ ಬೊಮ್ಮಾಯಿಯವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಸಯ್ಯದ್ ಅಜೀಂಪೀರ್ ಎಸ್ ಖಾದ್ರಿ ಹೇಳಿದರು 

ಪಟ್ಟಣದ ಮುನಶಿ ಕಾಂಪ್ಲೇಕ್ಸ್‌ನಲ್ಲಿ ಮಾತನಾಡಿದ ಅಜ್ಜಂಪೀರ್ ಖಾದ್ರಿಯವರು ಹಾವೇರಿ ಜಿಲ್ಲೆ ರಚನೆಯಾಗಿ 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ದಿ.ಸಿ ಎಂ ಉದಾಶಿ ಮತ್ತು ರಾಜ್ಯ ಸಚಿವರಾಗಿದ್ದ ಬಸವರಾಜ ಶಿವಣ್ಣವರ ಒಳಗೊಂಡಂತೆ ಜಿಲ್ಲೆಯ ಅನೇಕ ನಾಯಕರು ಮತ್ತು ಹಿರಿಯರು ಸೇರಿ ನಿರಂತರ ಶ್ರಮ ಪಟ್ಟು ಅಂದಿನ ಮುಖ್ಯಮಂತ್ರಿಯ ಮನ ಓಲೈಸಿ ಹಾವೇರಿ ಮತ್ತು ಗದಗ ಜಿಲ್ಲೆಯನ್ನು ಅಸ್ಥಿತ್ವಕ್ಕೆ ತಂದರು.  

ಐತಿಹಾಸಿಕ ವಿಷೇಶತೆಗಳನ್ನು ಒಳಗೊಂಡಿರುವ ಈ ಯಾಲಕ್ಕಿ ಕಂಪಿನ ನಾಡು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಯುತ್ತಾರೆ, 8 ತಾಲೂಕು, 224 ಗ್ರಾಮ ಪಂಚಾಯತಿ 703 ಗ್ರಾಮಗಳನ್ನು ಒಳಗೊಂಡಿರುವ ಈ ಜಿಲ್ಲೆ  ನಾಲ್ಕು ಪ್ರಮುಖ ನದಿಗಳನ್ನು ಹರಿಸಿ ರೈತರಿಗೆ ವರದಾನವಾಗಿದೆ. ಈ ಒಂದು ನಾಡು ಸಂತ, ಶರಣರ ನಾಡಾಗಿದೆ. ಹಾಗಾಗಿ ರಾಜ್ಯದಲ್ಲಿಯೇ ಭಾವೈಕ್ಯತೆಯ ನಾಡು ಯಾವುದಾದರೂ ಇದ್ದರೆ ಅದು ನ್ನಮ್ಮ ಹಾವೇರಿ ಜಿಲ್ಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಬ್ಯಾಡಗಿಯ ಮೆಣಸು, ರಾಣೆಬೆನ್ನೂರಿನ ಹತ್ತಿ ಮಾರುಕಟ್ಟೆ, ಹಾವೇರಿಯ ಯಾಲಕ್ಕಿ ಮಾಲೆ, ಗೊಟಗೋಡಿ ಜಾನಪದ ಯುನಿವರ್ಸಿಟಿ ದೇಶದಲ್ಲಿಯೇ ಖ್ಯಾತಿಯನ್ನು ಹೊಂದಿವೆ.  

ಮುಖಂಡರಾದ ಅಣ್ಣಪ್ಪ ಲಮಾಣಿ, ಗೌಸಕಾನ ಮುನಸಿ, ರವಿ ಗುದುಗಿ, ಮಾಲತೇಶ ಸಾಲಿ, ವೀರೇಶ ಜಟ್ಟಪ್ಪನವರ, ಸಲೀಮ ಫರೋಖಿ, ಶಂಬೂ ನೆರ್ತಿ, ಸುಮಿತ ಸೂರ್ಯವಂಶಿ, ರಶೀದ, ಮುನ್ನಾ ಲಕ್ಷ್ಮೇಶ್ವರ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯ ಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ