25 ರಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ
ಲೋಕದರ್ಶನ ವರದಿ
ಬಳ್ಳಾರಿ 13: ಜಿಲ್ಲಾ ಮತ್ತು ತಾಲೂಕ ಮಟ್ಟದ ಆರೋಗ್ಯ ಇಲಾಖೆಯ ಓಊಒ ಗುತ್ತಿಗೆ (ಒಳ/ಹೊರ) ನೌಕರರ ಸಮಾನ ವೇತನ, ಸೇವಾ ಭದ್ರತೆ ಕುರಿತಾಗಿ ಪೂರ್ವಭಾವಿ ಸಭೆಯನ್ನು ಬಳ್ಳಾರಿ ತಾಲೂಕ ಆರೋಗ್ಯ ಅಧಿಕಾರಿಗಳ ಸಭಾಂಗಣದಲ್ಲಿ ಜರುಗಿಸಲಾಯಿತು.
ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಓಊಒ ಆಡಿಯಲ್ಲಿ ಬರುವ ಜಿಲ್ಲಾ ಹಾಗೂ ತಾಲೂಕ ಮಟ್ಟದ ಎಲ್ಲಾ ಕಾರ್ಯಕ್ರಮಗಳ ನೌಕರರು ಭಾಗವಹಿಸಿದ್ದರು. ಸದರಿ ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕ ಸಮಿತಿಯನ್ನು ರಚನೆ ಮಾಡಲು ತೀಮರ್ಾನಿಸಲಾಯಿತು. ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಜಿಲ್ಲಾ ಮಟ್ಟದ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅ.25/10/2018 ರಂದು ದೇಶವ್ಯಾಪಿ ನಡೆಯುವ ಓಊಒ (ಒಳ/ಹೊರ) ಗುತ್ತಿಗೆ ನೌಕರರ ಪ್ರತಿಭಟನೆಗೆ ಸಹಕರಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಅದರಂತೆ ಬಳ್ಳಾರಿ ಜಿಲ್ಲೆಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕ ಮಟ್ಟದಲ್ಲಿ ತಹಶೀಲ್ದಾರರವರಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲು ತೀಮರ್ಾನಿಸಲಾಯಿತು. ಪ್ರತಿಭಟನೆ ದಿನ ಬಳ್ಳಾರಿ ಜಿಲ್ಲೆಯ ಎಲ್ಲಾ ಆರೋಗ್ಯ ಇಲಾಖೆಯ ಓಊಒ (ಒಳ/ಹೊರ) ಗುತ್ತಿಗೆ ನೌಕರರು 1 ದಿನದ ಸಾಂರ್ಧಭಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಲು ಸಮಿತಿಯ ಅಧ್ಯಕ್ಷರಾದ ಡಾ|| ಲಕ್ಷ್ಮೀಕಾಂತ್ ಇವರು ಮನವಿ ಮಾಡಿದ್ದಾರೆ.