ಯರಗಟ್ಟಿ

ಉದ್ಯೋಗ ಖಾತರಿ ಕೆಲಸದೊಂದಿಗೆ ಕೂಲಿಕಾರರ ಆರೋಗ್ಯಕ್ಕೂ ಒತ್ತು

ಉದ್ಯೋಗ ಖಾತರಿ ಕೆಲಸದೊಂದಿಗೆ ಕೂಲಿಕಾರರ ಆರೋಗ್ಯಕ್ಕೂ ಒತ್ತು

ಲೋಕದರ್ಶನ ವರದಿ

ಯರಗಟ್ಟಿ 05: ಸಮೀಪದ ಮಬನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಬನೂರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ತಾಲೂಕ ಪಂಚಾಯತ ಸವದತ್ತಿ, ಗ್ರಾಮ ಪಂಚಾಯತಿ ಮಬನೂರ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ, ಸೋಮವಾರ ಮನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಬಳಿಕ ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ಕೆಲಸಕ್ಕಾಗಿ ಬರುವ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗುತ್ತಿದೆ. ಕೂಲಿಕಾರರಿಗೆ ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆಯೇ ಹೊರತು, ತಮ್ಮ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ. ಆದುದರಿಂದ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಬರುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು ಬಿಪಿ, ಶುಗರ್, ಸೇರಿದಂತೆ ಇನ್ನಿತರೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮತ್ತು  2023 ಏಪ್ರೀಲ್ 1 ರಿಂದ 309ರೂ ನಿಂದ 316 ರೂ. ಗಳಿಗೆ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷಕ್ಕೆ 100 ದಿನಗಳ ಕೆಲಸವನ್ನು ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಂದು ಕುಟುಂಬವು ಕೂಡಾ 100 ದಿನಗಳ ಕೆಲಸವನ್ನು ಪೂರೈಸಿ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.

 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರ್ ಎಸ್ ಚಿಪ್ಪಲಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಅಭಿವೃದ್ಧಿ ಅಧಿಕಾರಿ ಆರ್ ಎಸ್ ಚಿಪ್ಪಲಕಟ್ಟಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಸೋಮಪ್ಪ ಮಾದರ, ತಾಂತ್ರಿಕ ಸಹಾಯಕ ಯಲ್ಲಪ್ಪಾ ಕಾಮನ್ನವರ, ಗ್ರಾಪಂ ಸದಸ್ಯರುಗಳಾದ ವಿಠ್ಠಲ ಚುಂಚನೂರ, ಮಹಾದೇವ ಪಟಾತ, ವಿಠ್ಠಲ ಅಗಸಿಮನಿ, ವಾಯ್ ಎಫ್ ನರಿ, ವಾಯ್ ಬಿ ನರಿ, ಉಮೇಶ ದಂಡಿನ, ತಾಪಂ ಆಡಳಿತ ಸಹಾಯಕಿ ಮಹಾದೇವಿ ಕರ್ಲನವರ, ವೈಧ್ಯಾಧಿಕಾರಿ ಡಾ. ಮೇಘರಾಜ ಶೀಲವಂತ, ಆರೋಗ್ಯ ನಿರೀಕ್ಷಣಾಧಿಕಾರಿ ಹಣಮಂತ ಪಚ್ಚಿನವರ, ಆರೋಗ್ಯ ಶಿಕ್ಷಣಾಧಿಕಾರಿ ಆಯ್ ಆರ್ ಗಂಜಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಂಜುನಾಥ ಜಡಗನ್ನವರ, ಮಾಲಿಂಗ ತರಗೊಲ, ಗ್ರಾಪಂ ಕಾರ್ಯದರ್ಶಿ  ಜಿ ಕೆ ಸುಂಕದ, ಬಿಎಫ್ ಟಿ ಉಮೇಶ ಗೊರವನಕೊಳ್ಳ ಕಾಯಕ ಮಿತ್ರ ಕವಿತಾ ಮುರಗೋಡ, ಕೆಎಚ್ ಪಿಟಿ ಸಂಯೋಜಕ ಆನಂದ ಛಲವಾದಿ, ಆಶಾ ಕಾರ್ಯಕತರ್ೆಯರು, ಗ್ರಾಪಂ ಸಿಬ್ಬಂದಿಗಳು, ಕಾಯಕ ಬಂಧುಗಳು, ಇನ್ನಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ