ಬೈಲಹೊಂಗಲ

ಕನ್ನಡ ಭಾಷೆಯ ಉಳುವಿಗೆ ಒತ್ತು ನೀಡಿ: ಶಾಸಕ ಮಹಾಂತೇಶ ಕೌಜಲಗಿ

ಕನ್ನಡ ಭಾಷೆಯ ಉಳುವಿಗೆ ಒತ್ತು ನೀಡಿ: ಶಾಸಕ ಮಹಾಂತೇಶ ಕೌಜಲಗಿ

ಬೈಲಹೊಂಗಲ 01: ಕನ್ನಡ ನಾಡು, ನುಡಿ, ನೆಲ, ಜಲ ವಿಷಯ ಬಂದಾಗ ಪ್ರತಿಯೊಬ್ಬರು ಸ್ವಾಭಿಮಾನ ಮೆರೆಯಬೇಕು. ಕನ್ನಡ ನೆಲದ ಋಣ ಯಾವತ್ತಿಗೂ ಮರೆಯಬಾರದು. ಕನ್ನಡ ಭಾಷೆಯ ಉಳುವಿಗೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಬುಧವಾರ ನಡೆದ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. 

ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಪುರಸಭೆ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಶುಭ ಕೋರಿದರು.  

ವಿವಿಧ ಶಾಲೆ ಮಕ್ಕಳು ಸಂತರ, ಮಹಾತ್ಮರ, ರಾಷ್ಟ್ರನಾಯಕರ ವೇಷಭೂಷಣ ತೊಟ್ಟು ನೋಡುಗರ ಕಣ್ಮನ ಸೆಳೆದರು. ಗ್ರೇಡ್2 ತಹಶೀಲ್ದಾರ ಜೆ.ಸಿ.ಅಷ್ಟಗಿಮಠ, ಕ್ಷೇತ್ರಶಿಕ್ಷಣಾಧಿಕಾರಿ ಎ.ಎನ್‌.ಪ್ಯಾಟಿ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ವೈದ್ಯಾಧಿಕಾರಿ ಡಾ.ಸಂಜಯ ಸಿದ್ದನ್ನವರ, ಸಿಪಿಐ ಪಂಚಾಕ್ಷರಿ ಸಾಲಿಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾಂತಾ ಮರಿಗೌಡರ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಜಗದೀಶ ಜಂಬಗಿ, ವಿಜಯ ಬೋಳನ್ನವರ, ಅಂಜನಾ ಬೊಂಗಾಳೆ, ವೀನಾ ಪತ್ತಾರ, ಹೇಮಲತಾ ಹಿರೇಮಠ, ಶ್ರೀದೇವಿ ದೇವಲಾಪೂರ, ದಿಲ್ಲಶಾದ ನದಾಫ, ಬಸವರಾಜ ಭರಮನ್ನವರ, ಚಂದ್ರಶೇಖರ ಕೊಪ್ಪದ, ಪುರಸಭೆ, ಶಿಕ್ಷಣ ಇಲಾಖೆ, ಕಂದಾಯ, ಸಮಾಜ ಕಲ್ಯಾಣ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಇದ್ದರು. 


ಸುದ್ದಿ ಓದಿ