ಅವುರ್ಲಿಯ ತೋಟಗಳಲ್ಲಿ ಬಾಳೆ ಗೊನೆ ಹುಡುಕಾಟದಲ್ಲಿ ಆನೆ
Elephant spotted in avruli village
ಕಾರವಾರ 16: ಜೋಯಿಡಾ ತಾಲ್ಲೂಕಿನ ಅವುರ್ಲಿ ಗ್ರಾಮ ಹಾಗೂ ಗಣೇಶ ಗುಡಿ ಭಾಗದಲ್ಲಿ ಹೆಣ್ಣಾನೆಯೊಂದು ತೋಟಗಳಿಗೆ ಲಗ್ಗೆ ಇಟ್ಟಿದೆ. ಬಾಳೆ ಗೊನೆ ಆಹಾರ ಅರಸಿ ಬಂದ ಆನೆ ತೋಟ ನುಗ್ಗಿದ ಪರಿಣಾಮ ಅಡಿಕೆ ತೋಟ, ಭತ್ತದ ಗದ್ದೆಗಳು ನಷ್ಟಕ್ಕೆ ತುತ್ತಾಗಿವೆ. ಆನೆ ತೋಟಗಳಿಗೆ ನುಗ್ಗಿದ ವಿಷಯವನ್ನು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರೀಶೀಲನೆ ಮಾಡಿದರು. ದಾಂಡೇಲಿ, ಪಣಸೊಲಿ ಭಾಗದ ಆನೆ ಓಡಿಸುವ ಕಾರ್ಯ ನಡೆಯುತ್ತಿದೆ.
ಜೋಯಿಡಾ ಅರಣ್ಯಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಆನೆ ಭತ್ತದ ಗದ್ದೆ ಹಾಗೂ ಬಾಳೆ ತೋಟಗಳನ್ನು ಹುಡುಕಿ ಬರುವುದು ಸಾಮಾನ್ಯ. ರೈತರು ನಷ್ಟ ಭರಿಸಿಕೊಡುವಂತೆ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 