ಇಲೆಕ್ಟ್ರಿಕಲ್ ಅಂಗಡಿ ಕಳವು: ಆರೋಪಿ ಬಂಧನ
ಯರಗಟ್ಟಿ 19: ಪಟ್ಟಣದ ಇತ್ತಿಚೆಗೆ ಎರಡು ಇಲೆಕ್ಟ್ರಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಿ ಕಳ್ಳತನ ಮಾಡಿದವರನ್ನು ಬಂಧಿಸಿ ಅವರಿಂದ ಇಲೆಕ್ಟ್ರಿಕಲ್ ಅಂಗಡಿ ಕಳ್ಳತನಕ್ಕೆ ಸಂಬಂಧಪಟ್ಟ 45,000ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಅಬೇ ಗೂಡ್ಡ ಗಾಡಿಯನ್ನು ಹಿರೋ ಸ್ಟೇಂಡರ ಮೋಟಾರ ಸೈಕಲ ಸೆಂಟ್ರೋ ಕಂಪನಿಯ ಮೋಟಾರ ಸೈಕಲ ಮತ್ತು ಕಳ್ಳತನ ಮಾಡಿದ ವೈಂಡಿಂಗ್ ವಾಯರ್ 10 ಬಂಡಲ್ಗಳನ್ನು ಸುಟ್ಟ ಮೋಟಾರಗಳ ಸ್ಟ್ಯಾಪ್ ವೈಂಡಿಂಗ್ವಾಯರ ಗಳನ್ನು ಹೀಗೆ ಒಟ್ಟು 3,85,000 ರೂಪಾಯಿ ಕಿಮ್ಮತ್ತಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಶಕೀಲ ಹುಸೇನಸಾಬ ಸೈಯದ್ ಬಂಧಿತ ಆರೋಪಿಯಾಗಿದ್ದಾನೆ.ಕಾರ್ಯಾಚರಣೆಯಲ್ಲಿ ಡಿ.ಎಸ್.ಪಿ ರಾಮನಗೌಡ ಹಟ್ಟಿಮಾರ್ಗದರ್ಶನದಲ್ಲಿ, ಮುರಗೋಡ ಪೊಲೀಸ ಠಾಣೆ ಸಿಪಿಐ ಐ. ಎಮ್. ಮಠಪತಿ, ಪಿಎಸ್ಐ ಎಸ್. ಎಮ್. ಕಾರಜೋಳ ಮತ್ತು ಸಿಬ್ಬಂದಿಯಾದ ಎಮ್. ಚಿ. ಸಣ್ಣನಾಯಕ, ಎಸ್. ಎಮ್. ಹುಂಬಿ, ಐ. ಎಸ್. ವಕ್ಕುಂದ, ಕೆ. ಬಿ. ಅಲಗರಾವುತ, ಎಮ್. ಎಸ್. ಅವರಾದಿ, ಕೆ. ಆರ್. ಮುನವಳ್ಳಿ, ಎಮ್. ಆ. ಗುಡಗನಟ್ಟಿ, ವಿ. ಡಿ. ಸಕ್ರಿ, ವಿ. ಕ. ಮುರಗೋಡ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ಈ ತಂಡದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೆಳಗಾವಿ ಡಾ ಸಂಜೀವ ಪಾಟೀಲ ಕಾರ್ಯ ವೈಖರಿ ಬಗ್ಗೆ ಪ್ರಶಂಸಿಸಿದ್ದಾರೆ