ಮತದಾರರ ಪಟ್ಟಿ ಪರಿಷ್ಕರಣೆ ಸಭೆ
ಯರಗಟ್ಟಿ 23: ಮುನವಳ್ಳಿ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು, ನಿಧನ ಹೊಂದಿದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಮನೆ ಮನೆಗೆ ಸರ್ವೆ ಮಾಡಿ ನಿಖರ ದಾಖಲೆಗಳನ್ನು ನಿರ್ವಹಿಸಬೇಕು ಎಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಅವರು ಸಮೀಪದ ಮುನವಳ್ಳಿ ಪಟ್ಟಣದ ಪುರಸಭೆಯಲ್ಲಿ ಜರುಗಿದ ಮುನವಳ್ಳಿ ವಲಯದ ಬೂತ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪುರಸಭೆ ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಉಪತಹಶೀಲ್ದಾರ ಅವಜಿ, ಗ್ರಾಮಲೆಕ್ಕಾಧಿಕಾರಿ ಹೆಗಡೆ, ಕಾಲವಾಡ, ಬೂತ ಮಟ್ಟದ ಅಧಿಕಾರಿಗಳಾದ ಎಸ್. ಆರ್. ಅಳಗುಂಡಿ, ವಿ. ವಿ. ಕೊಳಕಿ, ಜಿ. ಎಚ್. ನದಾಫ, ಎಂ. ಪಿ. ಪಾಟೀಲ, ಎಸ್. ಟಿ. ಬಂಡಿವಡ್ಡರ, ಆರ್. ಎಂ. ನಾಯ್ಕರ, ಭಾರತಿ ಹೋಟಿ, ರೇಖಾ ಶಾನಭೋಗ, ಹೇಮಾ ಹೊನ್ನಳ್ಳಿ, ಬಿ. ಬಿ. ಜಾಲಿಕಟ್ಟಿ, ಎಸ್. ಜಿ. ತುಡುವೇಕರ ಸೇರಿದಂತೆ ಇತರರು ಇದ್ದರು.