ಎಸ್ಡಿಎಮ್ಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಬ್ಯಾಡಗಿ 12: ತಾಲೂಕಿನ ಮಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಮ್ಸಿ ಅಧ್ಯಕ್ಷರಾಗಿ ಗೌಸ್ ಮೋಹಿದ್ದಿನ್ ಜಾಲಿಮರದ, ಉಪಾಧ್ಯಕ್ಷರಾಗಿ ಕೌಸರ್ ಭಾನು ಸೌದಾಗರ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಶಾಲಾ ಆವರಣದಲ್ಲಿ ಸಸಿಯನ್ನು ನೀಡುವ ಮೂಲಕ "ನಮ್ಮ ಶಾಲೆ, ನಮ್ಮ ಹೆಮ್ಮೆ" ಎಂದು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಜ್ಞೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಅಂಜುಮನ್ ಸಮಿತಿಯ ಅಧ್ಯಕ್ಷ ಬಡೇಸಾಬ್ ನದಾಫ, ಮಹ್ಮದಹನೀಫ್ ಪಾಟೀಲ, ಅಲ್ಲಾಭಕ್ಷು ನದಾಫ, ಇರ್ಫಾನ್ ಮಾಳಿ, ಮುಖ್ಯ ಶಿಕ್ಷಕಿ ರಿತ್ತಿ ಹಾಗೂ ಶಾಲಾ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.