ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ರಾಣಿಬೆನ್ನೂರ 31: ತಾಲೂಕಿನ ಉಕ್ಕುಂದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಶ್ರೀ ರಾಮಪ್ಪ ಸಿದ್ದಮ್ಮನವರ ಅಧ್ಯಕ್ಷರಾಗಿ ಹಾಗೂ ಜ್ಯೋತಿ ರವಿಕುಮಾರ ಕಡೇಮನಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡರು.
ಗ್ರಾಪಂ ಒಟ್ಟು 14ಸ್ಥಾನಗಳ ಸಂಖ್ಯಾಬಲವನ್ನು ಹೊಂದಿತ್ತು. ಆರ್‍ಬಿ ಓಲೇಕಾರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಓ ಡಿಡಿ ಗೊಂದಿ ಸೇರಿದಂತೆ ಗ್ರಾಪಂ ಸದಸ್ಯರುಗಳು, ಗ್ರಾಪಂ ಸಿಬ್ಬಂದಿ, ಮತ್ತಿತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗೌರವಿಸಿ ಅಭಿನಂದಿಸಿದರು.