ಈದ್-ಉಲ್-ಅಝಾ: ಪ್ರಾರ್ಥನೆ
ಕಾರವಾರ 21: ಕೋಡಿಬಾಗದ ಅಬಕಾರಿ ಕಚೇರಿ ಹತ್ತಿರವಿರುವ ಮಸ್ಜಿದ್-ಎ-ಫುರ್‌ಖಾನ್ ದಲ್ಲಿ ಈದ್-ಉಲ್-ಅಝಾ ನಿಮಿತ್ತ ಬೆಳಿಗ್ಗೆ 6.45 ಗಂಟೆಗೆ ಸರಿಯಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಸ್ಕನ್ನು ಧರಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮೌಲಾನಾ ವಾಜಿದ್‌ರವರು ನಮಾಝನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಈದ್-ಉಲ್-ಅಝಾ ಹಬ್ಬವನ್ನು ಆಚರಿಸುವ ಮಹತ್ವ ಹಾಗೂ ಹಿನ್ನೆಲೆಯ ಬಗ್ಗೆ ತಿಳಿಸಲಾಯಿತು. ಜಗತ್ತಿನ ಎಲ್ಲಾ ಜನರ ಸ್ವಾಸ್ಥ್ಯಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಸ್ಜಿದ್-ಎ-ಫುರ್‌ಖಾನ್ ನ ಅಧ್ಯಕ್ಷ ಆದಮ್ ಇದ್ರುಸ್ ಖಾನ್, ಮಾಜಿ ಅಧ್ಯಕ್ಷರಾದ ಶೌಕತ್ ಹುಸೇನ್ ಶೇಖ್, ಮೊಹ್ಮಮದ್ ರಫೀಕ್ ಮಿರ್ಜಾನ್ಕರ್, ರಾಷ್ಟ್ರ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್, ವಕೀಲರು ಮತ್ತು ಕಾರ‌್ಯದರ್ಶಿ ಎಸ್.ಎ.ಖಾಜಿ, ಡಾ. ನಯೀಮ್ ಮುಕಾದಮ್, ಫೈಸಲ್ ಮುಕಾದಮ್, ಷಫಿ ಶೇಖ್, ಅಬ್ದುಲ್ ರೆಹಮಾನ್, ರಾಷ್ಟ್ರಯುವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಹಸನ್ ಶೇಖ್,ಮೊಹಮ್ಮದ್ ಫೌಜಿ ಮಿರ್ಜಾನ್‌ಕರ್ ಮತ್ತು ಆಝಾದ್ ಯುಥ್ ಕ್ಲಬ್‌ನ ಕೋಶಾಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು.