ಈದ್- ಮಿಲಾದ್: ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ
ಬ್ಯಾಡಗಿ 10: ಪಟ್ಟಣದಲ್ಲಿ ಈದ್ ಮಿಲಾದ್ (ಪ್ರವಾದಿ ಮುಹ್ಮದ್ ಪೈಗಂಬರ) ಅವರ 1497ನೇ ಜನ್ಮ ದಿನಾಚರಣೆ ಅಂಗವಾಗಿ ಅಂಜುಮನ್-ಏ ಇಸ್ಲಾಂ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಹಬ್ಬದ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದಲೇ ಪಟ್ಟಣದ ಮಸೀದಿಗಳಲ್ಲಿ (ಪ್ರಾರ್ಥನಾ ಮಂದಿರದಲ್ಲಿ) ವಿಶೇಷ ಪ್ರಾರ್ಥನೆ ಮಾಡಲಾಯಿತು, ಪಟ್ಟಣದ ಬಹುತೇಕ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ಮಕ್ಕಳು ಸೇರಿದಂತೆ ಬಹುತೇಕ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಕೈಯಲ್ಲಿ ಹಸಿರು ವರ್ಣದ ಧ್ವಜದೊಂದಿಗೆ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರವ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಎಸ್.ಆರ್.ಪಾಟೀಲ, ಪ್ರಕಾಶ ಬನ್ನಿಹಟ್ಟಿ ಇವರಿಗೆ ಕಮೀಟಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಮಜಿದ ಮುಲ್ಲಾ, ಉಪಾಧ್ಯಕ್ಷ ಡಾ.ಎ.ಎಂ.ಸೌದಾಗರ, ಕಾರ್ಯದರ್ಶಿ ಮಹ್ಮದಶಫೀ ಮುಲ್ಲಾ, ಸದಸ್ಯರಾದ ಮಂಜೂರ್ಅಲಿ ಹಕಿಂ,ನವಿದ ಶಿಡೇನೂರ, ತೋಪಿಕ್ ಕಳ್ಯಾಳ, ರಫೀಕ್ ಬೆಳಗಾಂವ, ಶಫಿ ನಾಶಿಪುಡಿ, ಮುಖಂಡರಾದ ಅಲ್ಹಜ್ ಮಹ್ಮದರಫೀಕ ಹಕೀಂ, ರಾಜೆಸಾಬ ಕಳ್ಯಾಳ, ರಾಜೆಸಾಬ ಬೇಪಾರಿ, ಅಲ್ಲಾಭಕ್ಷ ಮಕಾಂದಾರ, ಬಾಬುಸಾಬ ಬಡಿಗೇರ, ಇಸ್ಮಾಯಿಲ್ಸಾಬ ಕಳಗೊಂಡ, ಇಬ್ರಾಹೀಂಸಾಬ, ಇರ್ಶಾದ ಮೋಮಿನ, ನವಿದ ಬಂಕಾಪುರ, ಚಮನಶಾ ಇನ್ನಿತರರು ಇದ್ದರು.