ಜೀವನದಲ್ಲಿ ಶ್ರಮ ನಿರಂತರವಾಗಿ ವಹಿಸಬೇಕು: ಹನುಂತರಾಯ
ಶಿಗ್ಗಾವಿ 11: ಕ್ರೀಡಾಕೂಟದಲ್ಲಿ ಗೆಲುವು ಸೋಲು ಮುಖ್ಯವಲ್ಲ, ಜೀವನದಲ್ಲಿ ಶ್ರಮವನ್ನು ನಿರಂತರವಾಗಿ ವಹಿಸಬೇಕು ಪೊಲೀಸ್ ಇಲಾಖೆಯ ಪ್ರಾಮಾಣಿಕತೆ ನಿಷ್ಟೆಯಿಂದ ಗೌರವ ಕಾಪಾಡಿಕೊಂಡು ಹೋಗುವದು ಅವಶ್ಯವಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹನುಂತರಾಯ ಹೇಳಿದರು.
ತಾಲೂಕಿನ ಗಂಗಿಭಾವಿಯ 10 ನೇ ಪಡೆ ಕೆಎಸ್ಆರ್ಪಿ, ಪೊಲೀಸ್ ಅಂತರದಳಗಳ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು ಕ್ರೀಡಾ ಸ್ಪೂರ್ತಿ ಕ್ರೀಡಾ ಮನೋಭಾವ, ನಿರಂತರ ಪರಿಶ್ರಮದಿಂದ ಉತ್ತಮ ಕ್ರೀಡಾ ಪಟುಗಳಾಗಿ ಹೋರಹೊಮ್ಮಲು ಸಾದ್ಯ, ಒತ್ತಡಗಳ ನಡುವೆ ಪೊಲೀಸರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ತಪ್ಪದೆ ವ್ಯಾಯಾಮು, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೋಂಡು ಸದೃಡ ಸಮಾಜವನ್ನು ನಿರ್ಮಾಣ ಮಾಡಬೇಕು, ಪ್ರತಿಯೋಬ್ಬರು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಸದೃಡ ಶರೀರ, ಸದೃಡವಾದ ಮನಸ್ಸು ಹೊಂದುವದು ಅವಶ್ಯವಿದೆ ಎಂದರು.
ತಾಂತ್ರೀಕ ಜೀವನ ಶೈಲಿಯಿಂದ ದೈಹಿಕ ಸಾಮರ್ಥ್ಯ ಕುಂಟಿತವಾಗುತ್ತಿದೆ, ಸದೃಡತೆ ವಾಕ್ಯವಲ್ಲ ಅದೋಂದು ಜೀವನ ಸ್ಥಂಭ ಉತ್ತಮವಾದ ಆರೋಗ್ಯದ ಜೊತೆಗೆ ಮಾನಸಿಕ ಸದೃಡತೆಯನ್ನು ಕಾಪಾಡಿಕೊಳ್ಳಬೇಕು ಸದೃಡ ಮನುಷ್ಯ, ಸದೃಡ ಪರಿವಾರ, ಸದೃಡ ಸಮಾಜ ಇದೆ ದೇಶಕ್ಕೆ ಶ್ರೇಷ್ಟವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು 10 ನೇ ಪಡೆ ಕೆಎಸ್ಆರ್ಪಿ ಕಮಾಡೆಂಟ್ ಕೆ.ಸುಂದರ್ ರಾಜು ವಹಿಸಿ ಮಾತನಾಡಿ ಪ್ರತಿಯೊಬ್ಬರು ಕ್ರೀಡಾಮನೋಭಾವನೆಯನ್ನು ಬೆಳಸಿಕೊಂಡಾಗ ದೈಹಿಕವಾಗಿ ಬಲಾಡ್ಯವಾಗಿರಲು ಸಾದ್ಯವಾಗುತ್ತದೆ ಆ ದಿಸೆಯಲ್ಲಿ ಪೊಲೀಸರು ಒತ್ತಡದ ಜೀವನ ಶೈಲಿಯಲ್ಲಿ ಇರುವದರಿಂದ ವ್ಯಾಯಾಮ, ಕ್ರೀಡೆ, ಸೇರಿದಂತೆ ಹಲವಾರು ಸ್ಪರ್ದೇಯಲ್ಲಿ ಪಾಲ್ಗೋಳ್ಳುವದು ಅವಶ್ಯವಾಗಿದೆ, ಮೀಸಲು ಪಡೆಯ ಪೊಲೀಸರು ಸಿವಿಲ್ ಪೊಲೀಸರೊಂದಿಗೆ ಕೈಜೋಡಿಸಿ ಉತ್ತಮವಾದ ಸಮಾಜವನ್ನು ಕಾಪಾಡಲು ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಶಿಗ್ಗಾವಿ ಶಾಖೆಯ ವ್ಯವಸ್ಥಾಪಕ ನಾಗರಾಜ ಅಡವಿ ಸಹಾಯಕ ಕಮಾಂಡೆಂಟ್ಗಳಾದ ವಿಶ್ವನಾಥ ನಾಯ್ಡ್, ದಾವಲ್ಸಾಬ ಆರ್ ಯಲಿಗಾರ, ಆರ್ಪಿಐಗಳಾದ ಸುರೇಶ ಡಂಬೇರ, ರಾಜಶೇಖರ ಪಾಟೀಲ, ನಾಗಪ್ಪ ಪಾರ್ವತಿ, ಮಾರುತಿ ಎಸ್.ಆರ್.ಹನುಮೇಶ ಬಿ. ಸಂತೋಷ ಜಿ. ಬಸ್ತವಾಡ, ಸೇರಿದಂತೆ ಪೋಲಿಸ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಸಹಾಯಕ ಕಮಾಂಡೆಂಟ್ ಶರಣಬಸು ಎಂ,ಕೋಲಾರಿ. ನೆರವೇರಿಸಿ ನಿರೂಪಿಸಿದರು, ಸಹಾಯಕ ಕಮಾಂಡೆಂಟ್ ವಿಶ್ವನಾಥ ರೆಡ್ಡಿ ವಂದಿಸಿದರು.