‘ತ್ಯಾಜ್ಯದ ವಸ್ತುಗಳಿಂದ ಮನುಷ್ಯನ ಆರೋಗ್ಯ ಮೇಲೆ ಪರಿಣಾಮ’
ಶಿಗ್ಗಾವಿ 08: ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯದ ಉಗಮ ಎಂದು ಹೇಳುತ್ತೇವೆ ಆ ವ್ಯರ್ಥ ತ್ಯಾಜ್ಯದ ವಸ್ತುಗಳಿಂದ ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಶಿಗ್ಗಾವಿಯಲ್ಲಿ ಒಣ ತ್ಯಾಜ್ಯ ಶೇಖರಣಾ ಘಟಕವನ್ನು ಪ್ರಾರಂಭಿಸಲಗುತ್ತಿದೆ ಎಂದು ಪುರಸಭೆ ಅದ್ಯಕ್ಷೆ ರೂಪಾ ಬನ್ನಿಕೊಪ್ಪ ಹೇಳಿದರು.
ಪಟ್ಟಣದ ಶರೀಫ ಭವನದ ಪಕ್ಕದಲ್ಲಿ ಪುರಸಭೆ ವತಿಯಿಂದ ತೆರೆಯಲಾದ ಒಣ ತ್ಯಾಜ್ಯ ಶೇಖರಣಾ ಘಟಕವನ್ನ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮರುಬಳಕೆ ಮತ್ತು ಇಂಧನ ಬಳಕೆಗೆ ಬಳಸಲು ಶೇಖರಣೆ ಮಾಡಿ ಇಡಲು ಅನುಕೂಲವಾಗುವ ನಿಟ್ಟಿನಲ್ಲಿ ಒಣ ತ್ಯಾಜ್ಯ ಶೇಖರಣಾ ಘಟಕವನ್ನ ಗುರುತಿಸಿ ಪ್ಲಾಸ್ಟಿಕ್, ರಬ್ಬರ್, ಇತ್ಯಾಧಿ ಒಣ ಕಸವನ್ನ ಶೇಕರಣೆ ಮಾಡಲು ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಚೇರಮನ್ ಜಾಫರಖಾನ.ಯೂಸಬ್ಸಾಬ್ ಪಠಾಣ್, ಪುರಸಭೆ ಸದಸ್ಯರಾದ ಸುಭಾಸ್ ಚೌವ್ಹಾನ್, ಸುಲೇಮಾನ್ ತರ್ಲಘಟ್ಟ, ದಯಾನಂದ ಅಕ್ಕಿ, ಸಂಗೀತಾ ವಾಲ್ಮೀಕಿ, ವಸಂತಾ ಬಾಗೂರ, ಪುರಸಭೆ ಮುಖ್ಯಾಧಿಕಾರಿ ವಾಯ್ ಕೆ ಜಗದೀಶ, ಪುರಸಭೆ ಸಿಬ್ಬಂದಿಗಳಾದ ಶಿವಕುಮಾರ ಕಮದೋಡ, ವಿ ಎಸ್ ಪಾಟೀಲ ಸೇರಿದಂತೆ ಪೌರಕಾರ್ಮಿಕರು ಇದ್ದರು.