ಶಿಕ್ಷಣ ಕ್ರಾಂತೀಯ ಹರಿಕಾರ
ಸಿಂದಗಿ07: ಅಂಬೇಡ್ಕರ ರವರು ಮೃತಪಟ್ಟ ದಿನವನ್ನು ಡಿ.6ರಂದು ಅಂಬೇಡ್ಕರ ರವರ ಪರಿ ನಿರ್ಮಾಣ ದಿನವನ್ನಾಗಿ ಆಚರಿಸಲಾಗುತ್ತದೆ. ಅಂಬೇಡ್ಕರರವರು ದಲಿತ ಕುಟುಂಬದಲ್ಲಿ ಜನಿಸಿದ್ದು ಅಸ್ಪೃಶ್ಯತೆಯನ್ನು ಎದುರಿಸಿ ಶೈಕ್ಷಣಿಕ ಉನ್ನತಿ ಪಡೆದರು, ಅಪರೂಪದ ಬುದ್ದಿವಂತಿಕೆಯ ತೋರಿಸಿದರು, ಕಡೆಯವರೆಗೂ ಅಸ್ಪೃಶ್ಯತೆ ಅವರನ್ನು ಬಿಡದೆ ಕಾಡಿತು, ಅಂಬೇಡ್ಕರ ರವರು ನಿಧನರಾಗುವ ಕೇವಲ 20 ದಿನ ಮೊದಲು ಬೌದ್ಧ ಧರ್ಮವನ್ನು ಅಧ್ಯಯನ ಮಾಡಿ ಬೌದ್ದ ಧರ್ಮವನ್ನು ಸ್ವೀಕರಿಸಿದರು ಎಂದು ಭಾರತೀಯ ದಲಿತ ಪ್ಯಾಂಥರ ತಾಲೂಕಾ ಅಧ್ಯಕ್ಷರು ಶರಣಪ್ಪ ವಾಯ್ ಬೂದಿಹಾಳ ಹೇಳಿದರು.
ನಗರದ ಸೋಂಪುರ ರಸ್ತೆಯ ಅಂಬೇಡ್ಕರ ಹಾಗೂ ಬಾಬು ಜಗಜೀವನರಾಂ ಕಾಲೋನಿಯಲ್ಲಿ ಭೀಮರಾವ ಅಂಬೇಡ್ಕರರವರ 65 ನೇ ಪರಿನಿರ್ಮಾಣ ದಿನವನ್ನು ಆಚರಿಸಲಾಯಿತು.
ಭಾರತೀಯ ದಲಿತ ಪ್ಯಾಂಥರ ತಾಲೂಕ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಎಮ್. ರತ್ನಾಕರ ಮಾತನಾಡಿ ಅಂಬೇಡ್ಕರ ರವರು ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾಜದಲ್ಲಿ ವ್ಯಕ್ತಿಗತ ಗೌರವ ಸಿಗಬೇಕು ಮತ್ತು ಸಮಾಜದಲ್ಲಿ ಎಲ್ಲರೂ ಶಿಕ್ಷಣವವಂತರಾಗಬೇಕು ಮೊದಲು ಶಿಕ್ಷಣ ನಂತರ ಸಂಘಟನೆ, ಹೋರಾಟ ಅನ್ನುವ ಶಿಕ್ಷಣದ ಮಾರ್ಗವನ್ನು ಹಾಕಿಕೊಟ್ಟಂತಹ ಮಹಾನ್ ನಾಯಕ್, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರವರು ತಮ್ಮ ಪ್ರಾಥಮಿಕ ಅಧ್ಯಯನ ಹಿಡಿದುಕೊಂಡು ಅವರ ನೆಚ್ಚಿನ ಗುರುಗಳಾದಂತಹ ಸಂಬಾಜಿರಾವ ಅಂಬೇವಾಡಕರ ಹಾಗೂ ಶಾಹು ಮಹಾರಾಜರ ಅತ್ಯಂತ ಪ್ರೀತಿಯ ಶಿಷ್ಯರಾಗಿ ಅವರೆಲ್ಲ ಶಿಕ್ಷಣವನ್ನು ತಮ್ಮ ನೆಚ್ಚಿನ ಗುರುಗಳ ಮೇಲೆ ಹಾಕಿ ಅವರು ಕೊಟ್ಟಂತಹ ತನು ಮನ ಧನ ಸಹಾಕಾರದಿಂದ ಅವತ್ತು ಇಡೀ ವಿಶ್ವಕ್ಕೆ ಮಹಾನ್ ನಾಯಕನಾಗಲು ಅವಕಾಶವಾಯಿತು.
ಇಂತಹ ಮಹಾನ್ ನಾಯಕ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಂಡು ಹೋಗಬೇಕು ಅಂತಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೀರಾಮಾತಾ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರುಗಳು ವಿದ್ಯಾರ್ಥಿಗಳು ಭಾಗವಹಿಸಿದರು. ಹೀರಾಮಾತಾ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಚಿನ ಪವಾರ ವಂದಿಸಿದರು.
ಕಾಜು ಬಂಕಲಗಿ ಆಶ್ರಯ ಕಮೀಟಿ ಸದಸ್ಯರು, ಅರ್ಜುನ ದೊಡಮನಿ, ಸುನೀಲ ಕುಚಬಾಳ, ಸುನೀಲ ನಾಗಾವಿ, ಸತೀಶ ರತ್ನಾಕರ, ಸಂಜನಾ ಕನ್ನೋಳ್ಳಿ, ಸುಧೀರ ಬಟವಾಲ ಭಾಗವಹಿಸಿದರು.