ಸಮಾಜದ ಸವರ್ಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅಗತ್ಯ: ಕೆ.ತಿಪ್ಪೇಸ್ವಾಮಿ
ಲೋಕದರ್ಶನ ವರದಿ
ಕಂಪ್ಲಿ03: ತಾಲೂಕಿನ ಕಂಪ್ಲಿ-ಕೋಟೆಯ ಐತಿಹಾಸಿಕ ಪಂಪಾಪತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಕಂಪ್ಲಿ ಫಿಕರ್ಾದ ನಾಗಲೀಕ ಬಣಗಾರ(ಸಿಂಪಿ) ಸಮಾಜದವತಿಯಿಂದ ರುದ್ರಾಭಿಷೇಕ ಸೇರಿದಂತೆ ಪೂಜಾ ಕಾರ್ಯಕ್ರಮಗಳು ಭಾನುವಾರ ಜರುಗಿತು.
ನಂತರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಾಗಲೀಕ ಬಣಗಾರ(ಸಿಂಪಿ) ಸಮಾಜದ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿ, ಸಮಾಜವು ರಾಜಕೀಯ, ಆಥರ್ಿಕ, ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಾಗಿದೆ. ಸಂಘದ ಸರ್ವತೋಮುಖ ಬೆಳವಣಿಗೆ ಕಾರಣಿಬೂತರಾಗಬೇಕು. ಸಮಾಜದ ವಿದ್ಯಾಥರ್ಿಗಳು ಉತ್ತಮ ಶಿಕ್ಷಣದೊಂದಿಗೆ ಉನ್ನತ ಹುದ್ದೆಗೇರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ವಿದ್ಯಾಥರ್ಿಗಳು ಎಸ್ಎಸ್ಎಲ್ಸಿಯಲ್ಲಿ ಶೇಕಡ 80ರಷ್ಟು ಅಂಕಗಳಿಸಿದ, ಎ.ವಿ.ಪ್ರಿಯಾ, ವೈಷ್ಣವಿ, ಮನೋಜ್ಕುಮಾರ್ಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾಗಲೀಕ ಬಣಗಾರ(ಸಿಂಪಿ) ಸಮಾಜದ ಗೌರವಾಧ್ಯಕ್ಷ ಬಣಗಾರ್ ಚಂದ್ರಶೇಖರ್, ಸದಸ್ಯರಾದ ಎಸ್.ಸಿದ್ದಲಿಂಗ, ಮಲ್ಲಿಕಾಜರ್ುನ, ಯುವರಾಜ, ಬಿ.ಚಂದ್ರಶೇಖರ್, ಸುರೇಶ್, ವೀರಣ್ಣ, ಶಿವಲಿಂಗಪ್ಪ, ನಾಗರಾಜ, ವೀರಣ್ಣ(ಶಿಕ್ಷಕ), ಬಿ.ವಿಜಯಲಕ್ಷ್ಮಿ, ಮುಖಂಡರಾದ ಎಸ್ಎಸ್ಎಂ ಚನ್ನಯ್ಯಸ್ವಾಮಿ, ನಾಗರಾಜ, ಎಸ್.ಜಿ.ಚಿತ್ರಗಾರ, ಎಸ್.ಎಂ.ಮಾಬಲೇಶ್, ಜಿ.ಪ್ರಕಾಶ್ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.