ಇಂಡಿ

ಬದುಕಿಗಾಗಿ ಶಿಕ್ಷಣ ಅವಶ್ಯ: ಸಂತೋಷ ಬಂಡೆ

ಬದುಕಿಗಾಗಿ ಶಿಕ್ಷಣ ಅವಶ್ಯ: ಸಂತೋಷ ಬಂಡೆ

ಇಂಡಿ 19: ಗುಣಮಟ್ಟದ ಬದುಕಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದ್ದು,ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಸಂತೋಷ ಬಂಡೆ ಹೇಳಿದರು. ಅವರು ತಾಲೂಕಿನ ಹಿರೇರೂಗಿ ಗ್ರಾಮದ ಸಮೀಪ ಮರಡಿ ವಸತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿ ಸದಸ್ಯರಿಗೆ ಏರ್ಪಡಿಸಿದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಕಲಿಕಾ ವಾತಾವರಣ ನಿರ್ಮಾಣದಲ್ಲಿ ತಂದೆ, ತಾಯಿ, ಪೋಷಕ, ಪಾಲಕ, ಶಿಕ್ಷಕ, ಸಂಸ್ಥೆ, ಪರಿಸರ ಹಾಗೂ ಸಮುದಾಯಗಳು ಮಹತ್ವದ ಪಾತ್ರ ವಹಿಸುತ್ತವೆ ಹಾಗಾಗಿ ಎಲ್ಲರೂ ಗುರುತರ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಇಂದಿನ ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲ ಎಂದಾದರೆ ಮಕ್ಕಳ ಬಾಲ್ಯವು ಅಪಾಯದಲ್ಲಿದೆ ಎಂದು ಮನಗಾಣಬೇಕು.ಮಕ್ಕಳ ಬಾಲ್ಯ ಆಘಾತಗೊಳಗಾದರೆ ಅದು ಸಮಾಜವು ಛಿದ್ರವಾಗುತ್ತಿದೆ ಎಂದರ್ಥ. ಹಾಗಾಗಿ ಮಕ್ಕಳು ಚೆನ್ನಾಗಿ ಕಲಿಯುವಂತೆ ನೋಡಿಕೊಳ್ಳುವದಕ್ಕೆ ಕಂಕಣಬದ್ಧರಾಗುವದು ಇಡೀ ಸಮಾಜದ ಸಾಮೂಹಿಕ ಜವಾಬ್ದಾರಿ ಎಂದು ಬಿ ಆರ್ ಪಿ ಸಂಪನ್ಮೂಲ ವ್ಯಕ್ತಿ ಬಸವರಾಜ ಗೋರನಾಳ ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಮುಂಡಗನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಟ್ಟಪ್ಪ ಮಿರಗಿ ಹಾಗೂ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ರಮೇಶ ಗೌಡಗಾವಿ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಓದಿ