ಯರಗಟ್ಟಿ

ರೋಗನಿರೋಧಕ ಶಕ್ತಿ ಹೆಚ್ಚಲು ಪೌಷ್ಟಿಕ ಆಹಾರ ಸೇವಿಸಿ: ಗಂಜಿ

ರೋಗನಿರೋಧಕ ಶಕ್ತಿ ಹೆಚ್ಚಲು ಪೌಷ್ಟಿಕ ಆಹಾರ ಸೇವಿಸಿ: ಗಂಜಿ

ಯರಗಟ್ಟಿ 10: ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರು ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕೆಂದು ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್‌.ಗಂಜಿ ಹೇಳಿದರು. 

ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಅಂಗವಾಗಿ ಇತ್ತೀಚಗೆ ನಡೆದ ಪೌಷ್ಟಿಕ ಆಹಾರ ಮಹತ್ವದ ಬಗ್ಗೆ ಅರಿವು ಮುಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದ್ದು, ದಿನನಿತ್ಯ ಸೇವಿಸುವ ಆಹಾರದಲ್ಲಿ ಸೋಪ್ಪು, ತರಕಾರಿ, ಮೊಳಕೆಕಾಳು, ಬೇಳೆ ಕಾಳು, ದ್ವಿದಳ ಧಾನ್ಯಗಳು, ಹಣ್ಣು ಹಂಪಲುಗಳನ್ನು ಸೇವಿಸುವದರಿಂದ ಉತ್ತಮ ಪೌಷ್ಟಿಕಾಂಶ ದೊರೆಯಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. 

ಆರೋಗ್ಯ ಇಲಾಖೆ ಅಧಿಕಾರಿ ಸವಿತಾ ಚನ್ನಮೇತ್ರಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯಕರ ಜೀವನಕ್ಕೆ ಬೇಕಾಗಿರುವ ಸಮತೋಲನ ಆಹಾರವನ್ನು ಸೇವಿಸಬೇಕು. ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಗೆಡ್ಡೆ ಗೆಣಸುಗಳು ಮತ್ತು ಸಿರಿ ಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ ಎಂದರು.ಬಾಲವಿಕಾಸ ಸಮಿತಿ ಅಧ್ಯಕ್ಷೆ ರತ್ನವ್ವಾ ಮರ್ಚಪ್ಪನವರ, ಸಮುದಾಯ ಆರೋಗ್ಯ ಅಧಿಕಾರಿ ವಸಂತ ಚವ್ಹಾನ, ಫಕೀರವ್ವ ಮುಂದಿನಮನಿ, ಎಸ್‌.ಆರ್‌.ಶಿರಸಂಗಿ, ಎಮ್‌.ಎಮ್‌.ಜಕ್ಕನ್ನವರ, ವಾಯ್‌.ಕೆ.ತಳವಾರ, ಎಸ್‌.ಆರ್‌.ಶೀರೊಳ, ಎಸ್‌.ಎಫ್‌.ಬೆನಕಟ್ಟಿ, ಎಸ್‌.ವಿ.ಬೆನಕಟ್ಟಿಮಠ, ಶ್ರೀದೇವಿ ಮುಂದಿನಮನಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ