ರಾಷ್ಟ್ರೀಯ

ಬ್ಯಾಂಕ್ ಹಗರಣ: ಸಂಜಯ್ ರಾವುತ್ ಪತ್ನಿಗೆ ಇಡಿ ಸಮನ್ಸ್ ಜಾರಿ

ಬ್ಯಾಂಕ್ ಹಗರಣ:  ಸಂಜಯ್ ರಾವುತ್  ಪತ್ನಿಗೆ  ಇಡಿ  ಸಮನ್ಸ್ ಜಾರಿ

ಮುಂಬೈ, ಡಿಸೆಂಬರ್ 28: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್ ಹಗರಣದ  ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ವರ್ಷಾ ರಾವತ್ ನಾಳೆ ಮಂಗಳವಾರ ತನಿಖಾ  ಏಜೆನ್ಸಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.  ಮಾಹಿತಿ ಪ್ರಕಾರ, ಪ್ರಕರಣದಲ್ಲಿ ಪ್ರವೀಣ್ ರಾವುತ್ ಎಂಬ ಮತ್ತೊಬ್ಬ ಆರೋಪಿ ಪತ್ನಿಯೊಂದಿಗೆ ವರ್ಷಾ ರಾವತ್ ಅವರ 50 ಲಕ್ಷ ರೂ. ಹಣ ವರ್ಗಾವಣೆ  ಮಾಡಿದ್ದಾರೆ ಎಂಬ ಗುರುತರ ಆರೋಪ ಹೊರಿಸಲಾಗಿದೆ.

ಇದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ವರ್ಷಾ ರಾವುತ್ ಅವರನ್ನು ಕರೆಸಿ ಕೊಳ್ಳಲಾಗಿದೆ.ಮೂಲಗಳ ಪ್ರಕಾರ, ಪಿ.ಎಂ.ಸಿ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಸಂಜಯ್ ರಾವುತ್ ಪತ್ನಿ ವರ್ಷಾಗೆ ಮೂರನೇ ಭಾರಿಗೆ ಸಮನ್ಸ್ ಜಾರಿಯಾಗಿದೆ ಎನ್ನಲಾಗಿದೆ.

 

ಸುದ್ದಿ ಓದಿ