ಚುನಾವಣೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರಿಗೆ ಒತ್ತಾಯ
ತಾಳಿಕೋಟೆ 08: ಶೈಕ್ಷಣಿಕ ರಜಾ ಅವಧಿಯಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ನಿಯಮಾನುಸಾರ ನೀಡಬೇಕಾದಗಳಿಕೆ ರಜೆ ಮಂಜೂರಾತಿ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರ ಅನಿಲಕುಮಾರ ಢವಳಗಿ ಅವರಿಗೆ ಮನವಿ ಸಲ್ಲಿಸಿದರು.2018-19, 2019-20, 2020-21ಸಾಲಿನ ರಜಾ ಅವಧಿಯಲ್ಲಿ ಅನೇಕ ಶಿಕ್ಷಕರು ಭೂತಮಟ್ಟದ ಅಧಿಕಾರಿ(ಬಿಎಲ್ಓ), ಸಂಕ್ಷಿಪ್ತಪರಿಕ್ಷರಣೆ, ಮತದಾರರ ನೋಂದಣಿ ಸ್ವೀಪ ಕಾರ್ಯಕ್ರಮ, ಮನೆ ಮನೆಗೆ ಹೋಗಿ ಮತದಾರರ ಚೀಟಿ ಹಂಚುವಿಕೆ, ಹಾಗೂ ಕೋವಿಡ್ 2020ರ ಕಾರ್ಯಕ್ರಮದಲ್ಲಿ ಮನೆ ಮನೆಗೆ ತೆರಳಿ ಅವರ ಮಾಹಿತಿಯನ್ನು ಕ್ವಾರಂಟೈನ್ ವಾಚ್ ಮೂಲಕ ಅಪ್ಲೋಡ ಮಾಡುವಿಕೆ ಹಾಗೂ ಹೈಬ್ರಿಡ್ ಬಿ.ಎಲ್.ಓ ತಂತ್ರಾಂಶ ಮೂಲಕ ಮನೆ ಮನೆಗೆ ತೆರಳಿ ಚುನಾವಣೆ ಕರ್ತವ್ಯ ನಿರ್ವಹಿಸಿದ ಎಲ್ಲ ಶಿಕ್ಷಕರುಗಳಿಗೆ ಕೆಸಿಎಸ್ಆರ್ ನಿಯಮಾನುಸಾರ ಕಾರ್ಯನಿರ್ವಹಿಸಿದ ದಿನಗಳಿಗೆ ಗಳಿಕೆ ರಜೆಗಳನ್ನಾಗಿ ಮಂಜೂರು ಮಾಡಲು ಮನವಿಯಲ್ಲಿ ವಿನಂತಿಸಲಾಯಿತು.
ಮನವಿ ಸ್ವಿಕರಿಸಿದ ತಹಶಿಲ್ದಾರ ಅನೀಲಕುಮಾರ ಢವಳಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕಳಿಸಿ ಸೂಕ್ತ ಕ್ರಮ ಕೈಕೊಳ್ಳಲಾಗುವದು ಎಂದರು.ತಾಲೂಕು ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ, ಪ್ರಧಾನ ಕಾರ್ಯದರ್ಶಿ ಸುರೇಶ ಬೀರಗೊಂಡ, ಗೌರವಾಧ್ಯಕ್ಷ ಎಸ್.ಎಸ್.ತೀರ್ಥ ಮಹಿಳಾ ಉಪಾಧ್ಯಕ್ಷೆ ಎ.ಆರ್.ಹಜೇರಿ, ಸಹ ಕಾರ್ಯದರ್ಶಿ ಆರ್.ಬಿ.ಆಲೂರ, ಸಂಘಟನಾ ಕಾರ್ಯದರ್ಶಿ ಅಂಬಿಕಾ ಗೋಗಿ, ಕೋಶಾಧ್ಯಕ್ಷ ಎ.ಡಿ.ಗೋನಾಳ, ಸಹ ಕಾರ್ಯದರ್ಶಿ ಎಂ.ಎಲ್.ಚೌದರಿ ಸದಸ್ಯರಾದ ವೈ.ಬಿ.ಕರಭಾವಿ, ವೈ.ಎಸ್.ಸಿರಸಗಿ ಉರ್ದು ಮಾದರಿ ಶಾಲೆಯ ಮುಖ್ಯಗುರು ಎ.ಎಂ.ನಗರ್ಚಿ ಸೇರಿದಂತೆ ಇತರರು ಇದ್ದರು.