ಅಕ್ಟೋಬರ್ 03 ರಿಂದ ರಾಜರಾಜೇಶ್ವರಿ ಆಶ್ರಮದಲ್ಲಿ ದಸರಾ ಉತ್ಸವ ಪ್ರಾರಂಭ
ಯರಗಟ್ಟಿ, 30: ಸ್ಥಳೀಯ ರಾಜರಾಜೇಶ್ವರಿ ಆಶ್ರಮದಲ್ಲಿ ನವರಾತ್ರಿ ಉತ್ಸವ ನಿಮಿತ್ತ ರವಿವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಉತ್ಸವ ನಿಮಿತ್ತ ಪುರಾಣ ಪಠಣ, ಪಲ್ಲಕ್ಕಿ ಮೆರವಣಿಗೆ, ಅನ್ನ ಸಂತರೆ್ಣ ಸೇರಿ ಇತರ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪೂಜ್ಯ ಗಣಪತಿ ಮಹಾರಾಜರ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಮಾತನಾಡಿದ ಶ್ರೀಗಳು, ಈ ವರ್ಷವೂ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಅಕ್ಟೋಬರ್ 03, ಗುರುವಾರ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 03, ಗುರುವಾರದಂದು ಘಟಸ್ಥಾಪನೆ , ಅಕ್ಟೋಬರ್ 11, ಶುಕ್ರವಾರದಂದು ದುರ್ಗಾಷ್ಟಮಿ ಮತ್ತು ಮಹಾ ನವಮಿಯನ್ನು ಆಯುಧ ಪೂಜೆ, ಅಕ್ಟೋಬರ್ 12, ಶನಿವಾರದಂದು ವಿಜಯ ದಶಮಿ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.
ಈ ವೇಳೆ ಪಿ. ಎಚ್. ಪಾಟೀಲ, ವಿಠ್ಠಲಗೌಡ ದೇವರಡ್ಡಿ, ರಾಜೇಂದ್ರ ಶೆಟ್ಟಿ, ಸೋಮನಗೌಡ ದ್ಯಾಮನಗೌಡ್ರ, ಎನ್. ಬಿ. ಪೂಜೇರ, ಎಂ. ಬಿ. ಘೋಡಗೇರಿ, ಎಚ್. ಬಿ. ಪತ್ತಾರ, ಕೆ. ಎಫ್. ನದಾಫ, ಗೋವಿಂದಪ್ಪ ನಾಯ್ಕ, ಬಸಪ್ಪ ಅಂಗಡಿ, ಬಾಸ್ಕರ ಹಿರೇಮೆತ್ರಿ, ರವಿ ಮಡಿವಾಳ, ಎಸ್. ಎಚ್. ನಾಯ್ಕರ, ವಿಠ್ಠಲ ಸುಣಧೋಳಿ, ಡಾ. ಎಂ. ವಿ. ಪಟ್ಟಣ, ರಮೇಶ ಹಳದಿ, ಸುಭಾಸ ರುಗೆ, ಚಿದಂಬರ ಕದಂ ಸೇರಿದಂತೆ ಇತರರು ಇದ್ದರು.