ರಾಣೆಬೆನ್ನೂರ

ಮಾಲತೇಶ ಸ್ವಾಮಿಯ ದಸರಾ ಕಾರ್ಣಿಕೋತ್ಸವ

ಮಾಲತೇಶ ಸ್ವಾಮಿಯ ದಸರಾ ಕಾರ್ಣಿಕೋತ್ಸವ

ರಾಣೆಬೆನ್ನೂರು  3: ತಾಲೂಕಿನ ಸುಕ್ಷೇತ್ರ( ಗುಡ್ಡಗುಡ್ಡಾಪುರ)ದೇವರಗುಡ್ಡ ಗ್ರಾಮದಲ್ಲಿ  ಮಾಲತೇಶ ಸ್ವಾಮಿಯ ದಸರಾ ಮತ್ತು ಕಾರ್ಣಿಕೋತ್ಸವ  ಕಾರ್ಮಿಕ  ಕಾರ್ಯಕ್ರಮಗಳು ಜರುಗಲಿವೆ. ಕಳೆದ ಸೆ. 26 ರಿಂದ ಸೋಮವಾರ ಘಟಸ್ಥಾಪನೆಯ ಮೂಲಕ, ದಸರಾ ಕಾರ್ಯಕ್ರಮಗಳು ಆರಂಭವಾಗಿದ್ದು, ಅ.3ರಂದು.ಸೋಮವಾರ.ದುಗಾಷ್ಟಮಿ. 4 ರಂದು 6:00 ಗಂಟೆಗೆ ಮಹಾನವಮಿ. ಮತ್ತು ಗುರುಗಳ ಆರ್ಶಿರ್ವಾದ ಹಾಗೂ ಕಾರ್ಣಿಕ ಅಜ್ಜನವರಿಂದ ವಾರ್ಷಿಕ ಕಾರ್ಣಿಕೋತ್ಸವ . ಅ.5ರಂದು  ಬುಧವಾರ ವಿಜಯದಶಮಿ, ಸಂಜೆ 4 ಗಂಟೆಯಿಂದ, ಕಂಚಿವೀರರಿಂದ ಶಸ್ತ್ರ ಪವಾಡಗಳು ಹಾಗೂ ಗೊರವಯ್ಯನವರಿಂದ ಸರಪಳಿ ಪವಾಡಗಳು ನಡೆದು ನಂತರ ಬನ್ನಿ ಮುಡಿಯುವುದು. ಮತ್ತು 9 ರಂದು  ರವಿವಾರ ಸೀಗಿ ಹುಣ್ಣಿಮೆ, ಅಕ್ಟೋಬರ್ 19ರಂದು 2022 ರಂದು ಬುಧವಾರ ಕುದುರಿ ಹಬ್ಬ ಜರುಗಲಿದೆ ಎಂದು ವಿವರಿಸಿರುವ ಕಮಿಟಿಯ ಸದಸ್ಯರಾದ ಮಾಲತೇಶ ಪೂಜಾರ್ ಅವರು, ಪ್ರತಿವರ್ಷದಂತೆ ಈ ವರ್ಷವೂ ಸಹ, ಗ್ರಾಮ ಪಂಚಾಯಿತಿ ವತಿಯಿಂದ ಶ್ರೀ ರಣದಮ್ಮ ದೇವಿ ಗುಡಿ ಹತ್ತಿರ ದನಗಳ ಜಾತ್ರೆಯೂ ನಡೆಯಲಿದೆ ಎಂದು ಹೇಳಿದ್ದಾರ 

ಸುದ್ದಿ ಓದಿ