ಶಿಗ್ಗಾವ್

ದುರ್ಗಾದೇವಿ ಜಾತ್ರಾ ಮಹೋತ್ಸವ ಸರಳ ಆಚರಣೆ

ದುರ್ಗಾದೇವಿ ಜಾತ್ರಾ ಮಹೋತ್ಸವ ಸರಳ ಆಚರಣೆ

ಶಿಗ್ಗಾವಿ 31 : ತಾಲೂಕಿನ ಬಂಕಾಪೂರ ಪಟ್ಟಣದ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಗೃಹ ಹಾಗೂ ಸಂಸದೀಯ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ದೇವಿಯ ಆರ್ಶೀವಾದ ಪಡೆದರು.

ಜಾತ್ರಾ ಮಹೋತ್ಸವ ಸಮಿತಿ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿವರ್ಷದಂತೆ ಈ ವರ್ಷವು ಸಹಿತ ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಮತ್ತು ಸುಂದರವಾಗಿ ಅಚ್ಚುಕಟ್ಟಾಗಿ ಜಾತ್ರಾ ಮಹೋತ್ಸವ ನೇರವೇರಿಸಿದ ಸಮಿತಿಯ ಸದಸ್ಯರಿಗೆ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಬಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ, ತಾಲೂಕ ಬೋವಿ ಸಮಾಜ ಅಧ್ಯಕ್ಷ ಅರ್ಜುನ ಹಂಚಿನಮನಿ, ತಾಲೂಕ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ತಾಲೂಕ ಕಾರ್ಯದರ್ಶಿ ಬಸವರಾಜ ನಾರಾಯಣಪೂರ, ಉಮೇಶ ಅಂಗಡಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ