ದುರದುಂಡೀಶ್ವರ ಹೋಲಸೇಲ್ ಕಾಯಿಫಲ್ಲೆ ಮಾರುಕಟ್ಟೆ ಸ್ಥಳಾಂತರ ಖಂಡಿಸಿ ಬಂದ್
15ರಂದು ಸಂಕೇಶ್ವರ ಸ್ವಯಂ ಪ್ರೇರಿತ ಬಂದ್
ಸಂಕೇಶ್ವರ: ಎಂ.ಬಿ. ಘಸ್ತಿ
ನಿಡಸೋಶಿ ಮಠದ ಮಾಲೀಕತ್ವದ ದುರದುಂಡೀಶ್ವರ ಹೋಲಸೇಲ್ ಕಾಯಿಫಲ್ಲೆ ಮಾರುಕಟ್ಟೆಯನ್ನು ಯಾವುದೇ ನೋಟಿಸ್ ನೀಡದೆ ಜಿಲ್ಲಾಧಿಕಾರಿಗಳು ಮೊಹಮ್ಮದ ರೋಷನ ಮತ್ತು ತಾಲೂಕ ಆಡಳಿತ ಅಧಿಕಾರಿ ಮಂಜುಳಾ ನಾಯಿಕ ಈ ಅಧಿಕಾರಿಗಳು ಈ ಮಾರುಕಟ್ಟೆಯನ್ನು ಬಂದ ಮಾಡಿದ್ದಾರೆ, ಕಳೆದ 20 ದಿನಗಳಿಂದ ಈ ಕಾಯಿಫಲ್ಲೆ ಬಂದ ಮಾಡಿದ ಜಿಲ್ಲಾಡಳಿತದ ಆದೇಶದ ವಿರುದ್ಧ ದುರದುಂಡೀಶ್ವರ ಕಾಯಿಫಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಲೈಸನ್ಸ ಹೊಂದಿದ ಅಲ್ಲಿಯ ವ್ಯಾಪಾರಸ್ಥರು ಈ ಆದೇಶಕ್ಕೆ ತಡೆಯಾಜ್ಞೆ ಅಥವಾ ರದ್ದುಗೊಳಿಸಬೇಕೆಂದು ವ್ಯಾಪಾರಸ್ಥರು ಉಚ್ಚ ನ್ಯಾಯಾಲಯ ಪೀಠ ಧಾರವಾಡ ರಜಾ ದಿನಗಳ ನ್ಯಾಯಾಲಯ (ವೆಕೆಶನ್) ನ್ಯಾಯಾಲಯದಲ್ಲಿ ರಿಟ್ ಅಪೀಲ ಸಲ್ಲಿಸಿದ್ದು ತಿಳಿದುಬಂದಿದೆ.
ಈ ದುರದುಂಡೀಶ್ವರ ಹೋಲಸೇಲ್ ಮಾರುಕಟ್ಟೆಯಿಂದ ಸಾವಿರಾರು ರೈತರಿಗೆ ಅಪಾರ ನಷ್ಟವಾಗುತ್ತದೆ ಮತ್ತು ನೂರಾರು ದಲಾಲಿಗಳು ಮತ್ತು ವ್ಯಾಪಾರಿಗಳಿಗೆ ಬದುಕು ದುಸ್ತರವಾಗಿದೆ. ಈ ಮಾರುಕಟ್ಟೆಯನ್ನು ಪುನಃ ಇಲ್ಲಿಯೇ ಉಳಿಸಿಕೊಳ್ಳಲು ನಿನ್ನೆ ಧಿಡಿರನೆ ಸಂಕೇಶ್ವರ ನಾಗರಿಕ ಸಲಹಾ ಸಮೀತಿಯವರು ಪತ್ರಿಕಾ ಗೋಷ್ಟಿಯನ್ನು ಕರೆದು ಕಾಯ್ದೆ ಕಾನೂನಿನ ಹೆಸರಿನಲ್ಲಿ ಸಂಕೇಶ್ವರ ವಾತಾವರಣವನ್ನು ತಾಲೂಕ ಆಡಳಿತ ಮತ್ತು ಜಿಲ್ಲಾಡಳಿತ ಕ್ರಮವನ್ನು ಖಂಡಿಸಿ ಸಂಕೇಶ್ವರ ವ್ಯಾಪಾರಿ ಅಸೋಶಿಯೇಶನದ ಅಧ್ಯಕ್ಷ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಅಮರ ಮಧುಕರ ನಲವಡೆ ಹಾಗೂ ಸುನೀಲ ಅಣ್ಣಾಸಾಹೇಬ ಪರ್ವತರಾವ, ವ್ಯಾಪಾರಿ ಅಸೋಶಿಯೇಶನದ ಉಪಾಧ್ಯಕ್ಷ ಸಂಜಯ ಶಿರಕೋಳಿ, ಬಸನಗೌಡಾ ಪಾಟೀಲ, ಸುಭಾಷ ಕಾಸಾರಕರ ಇವರೆಲ್ಲರೂ ಜಂಟಿಯಾಗಿ ಅಕ್ಟೋಬರ 15 ರಂದು ಸಂಕೇಶ್ವರ ಸ್ವಯಂ ಪ್ರೇರಿತ ಬಂದ ಮಾಡಲಾಗುವುದು ಅದರ ಒಳಗಾಗಿ ತಾವು ಈ ಮಾರುಕಟ್ಟೆಯನ್ನು ಪುನಃ ಆರಂಭಿಸಬೇಕೆಂದು ಸಂಕೇಶ್ವರ ನಾಗರಿಕರೂ ತಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಬಂದ ಹೋರಾಟದಲ್ಲಿ ರೈತರು ವ್ಯಾಪಾರಸ್ಥರು ಶಾಂತ ರೀತಿಯಿಂದ ಭಾಗವಹಿಸಲಿದ್ದಾರೆಂದು ಒಗ್ಗಟ್ಟಿನಿಂದ ರೈತರು ಸ್ಥಳೀಯ ಪುರಸಭೆ ಸದಸ್ಯರು ಎಲ್ಲರೂ ಹಾಜರ ಇರುವರು, ಇಲ್ಲಿಯ ಪ್ರಸಿದ್ಧ ವ್ಯಾಪಾರಸ್ಥರಾದ ಹಾಗೂ ಯುವಜನನಾಯಕ ಪುರಸಭೆಯ ಸದಸ್ಯ ಸುನೀಲ ಪರ್ವತರಾವ ಇವರು ಈ ಮಾರುಕಟ್ಟೆಯಿಂದ ವರ್ಷಕ್ಕೆ ಸುಮಾರು 200 ಕೋಟಿ ರೂಪಾಯಿ ವಹಿವಾಟುವಾಗುತ್ತಿದ್ದು ನಾವು ಈ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಶತಸಿದ್ದರೆಂದು ತಿಳಿಸಿದರು.
ಕಳೆದ 30 ವರ್ಷಗಳ ಹಿಂದೆಯೇ ಒಕ್ಕಲುತನ ಹುಟ್ಟುವಳಿ ಪೇಟೆಯ ಸಮೀತಿಯವರು ಸ್ಥಳೀಯ ವ್ಯಾಪಾರಸ್ಥರಿಗೆ ದುರದುಂಡೀಶ್ವರ ಹೋಲಸೇಲ ಕಾಯಿಫಲ್ಲೆ ಮಾರಾಟಗಾರರಿಗೆ ಲೈಸನ್ಸ ನೀಡಿದ್ದು ಇರುತ್ತದೆ ಎಂದು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಪುರಸಭೆ ಉಪಾಧ್ಯಕ್ಷ ವಿವೇಕ ಕ್ವಳ್ಳಿ, ಪುರಸಬೆ ಸದಸ್ಯ ಚಿದಾನಂದ ಕರ್ದನ್ನವರ, ಪ್ರಶಾಂತ ಕೋಳಿ, ನಂದು ಮುಡಸಿ, ಕನ್ನಡಪರ ಹೋರಾಟಗಾರ ದೀಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ, ಹೊಲಸೇಲ ಕಾಯಿಫಲ್ಲೆ ವ್ಯಾಪಾರಸ್ಥ ಸಂತೋಷ ಕಮನೂರೆ ಹಾಗೂ ಇನ್ನುಳಿದ ವ್ಯಾಪಾರಸ್ಥರು ಉಪಸ್ಥಿತರಿದ್ದರು.