ಮಾರುಕಟ್ಟೆ, ಸರ್ಕಾರದ ವೈಫಲ್ಯತೆಗೆ ಆರ್ಥಿಕ ಅಸ್ಥಿರತೆಗೆ ಕಾರಣ: ಪ್ರೊ|| ಬಿ.ಕೆ.ತುಳಸಿಮಾಲಾ

ಮಾರುಕಟ್ಟೆ, ಸರ್ಕಾರದ ವೈಫಲ್ಯತೆಗೆ  ಆರ್ಥಿಕ ಅಸ್ಥಿರತೆಗೆ ಕಾರಣ: ಪ್ರೊ|| ಬಿ.ಕೆ.ತುಳಸಿಮಾಲಾ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಭಾರತದ ಸಮಗ್ರ ಅರ್ಥವ್ಯವಸ್ಥೆಯ ಅಸ್ಥಿರತೆ

ಲೋಕದರ್ಶನ ವರದಿ

ಬಳ್ಳಾರಿ 16: ಸರ್ಕಾರಗಳು ಬದಲಾದಂತೆ ತನ್ನದೇ ಆದ ಕೋಶೀಯ ನೀತಿಯನ್ನು ನಿರೂಪಿಸುತ್ತವೆ ಎಂದು ವಿಜಯನಗರದ ಶ್ರಿ ಕೃಷ್ಣ ದೇವಾರಾಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವೆ ಪ್ರೊ|| ಬಿ.ಕೆ.ತುಳಸಿಮಾಲಾ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಭಾರತದ ಸಮಗ್ರ ಅರ್ಥವ್ಯವಸ್ಥೆಯ ಅಸ್ಥಿರತೆಯ ನಿರ್ವಹಣೆ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು  ಅರ್ಥಶಾಸ್ತ್ರ ವಿಭಾಗವು ಕೌಟಿಲ್ಯ ಅರ್ಥಶಾಸ್ತ್ರ ಸಂಘದ ಅಡಿಯಲ್ಲಿ ಆಯೋಜನೆಯನ್ನು ಮಾಡಲಾಗಿತ್ತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಶ್ವವಿದಾಲಯದ ಆಡಳಿತ ಕುಲಸಚಿವೆ ಪ್ರೊ|| ಬಿ.ಕೆ.ತುಳಸಿಮಾಲಾ, 2008 ರಲ್ಲಿ ಜಾಗತಿಕ ಮಟ್ಟದಲ್ಲಿ ಆಥರ್ಿಕ ಮಹಾಕುಸಿತ ಉಂಟಾಗಿತ್ತು. ಇದರ ಪರಿಣಾಮವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಆಥರ್ಿಕ ಬಿಕ್ಕಟ್ಟನ್ನು ಎದುರಿಸಿದವು. ಸಕರ್ಾರಗಳು ಬದ್ದತೆಯಿಂದ ಕೆಲಸ ಮಾಡಬೇಕು ಹಾಗೂ ಉದ್ಯೋಗಗಳನ್ನು ಸೃಷ್ಟಿಸಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಕನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ|| ಎಸ್.ಟಿ.ಬಾಗಲಕೋಟಿ ಮಾತನಾಡಿ, ಹಣಕಾಸು ವಲಯವು ಸಂಕುಚಿತಗೊಂಡಾಗ ಅದು ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಅಮೆರಿಕಾವು ಸುರಕ್ಷಿತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ  ಇಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದರಿಂದ ಭಾರತೀಯ ರೂಪಾಯಿ ಮೌಲ್ಯ ಕುಸಿತವಾಗಿದೆ. ಆರ್ಬಿಐ 12 ಸಾವಿರ ಕೋಟಿ ಮೌಲ್ಯದ ಬಾಂಡ್ಗಳನ್ನು ಬಿಡುಗಡೆ ಮಾಡಿದೆ, ಇದು ರೂಪಾಯಿ ಮೌಲ್ಯ ಹೆಚ್ಚಿಸಲು ಸಹಾಯಕಾರಿಯಾಗಿದೆ ಎಂದರು. ಹಣವನ್ನು ಯಾವುದಕ್ಕೆ ವ್ಯಯ ಮಾಡಬೇಕು ಮತ್ತು ಯಾವುದಕ್ಕೆ ಮಾಡಬಾರದು ಎಂದು ತಿಳಿದು ಜನರು ಜೀವನವನ್ನು ಮಾಡಬೇಕೆಂದರು ಹಾಗೇ ಜಾಗತೀಕರಣ ಮಟ್ಟದಲ್ಲಿ ಹಣಕಾಸಿನ ತೊಂದರೇಯಾದ್ರೇ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹಾಗೇ ಇಂದಿನ ದಿನಗಳಲ್ಲಿ ಅರ್ಥಶಾಸ್ತ್ರ ವಿಭಾಗದ ವಿದ್ಯಾಥರ್ಿಗಳು ಇತಿಹಾಸವನ್ನು ತಿಳಿದುಕೊಳ್ಳಬೇಕೆಂದು ಸಂಶೊಧನೆಯನ್ನು ಮಾಡಬೇಕೆಂದು ತಮ್ಮ ಅನುಭದ ನುಡಿಯನ್ನು ವಿದ್ಯಾಥರ್ಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ಬಸವರಾಜ್ ಬೆಣ್ಣೆ , ಸಹಾಯಕ ಉಪನ್ಯಾಸಕರಾದ ಆರ್.ಪಾಂಡುರಂಗ, ಡಾ.ನಿರಂಜನ್, ಡಾ.ಡೋಲಿ, ಡಾ.ಶಶಿಧರ್, ವಿಭಾಗದ ಸಂಶೋಧನಾ ಹಾಗ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳು ಭಾಗವಹಿಸಿದ್ದರು.






ಸುದ್ದಿ ಓದಿ