ಲೋಕದರ್ಶನ ವರದಿ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಬಿತ್ತನೆ ಗುರಿಗಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ; ಜಿಲ್ಲೆಯಲ್ಲಿ ನ್ಯಾನೊ ರಸಗೊಬ್ಬರ ಬಳಕೆ ಹೆಚ್ಚುತ್ತಿದ್ದು, ರೈತರು ಕಾಳುಗೊಬ್ಬರ ಮಿತವಾಗಿ ಬಳಸಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು ಧಾರವಾಡ 03: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿಯವರೆಗೆ 2.81 ಲಕ್ಷ ಹೆಕ್ಟೆರ್ ಪ್ರದೇಶದ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟರ್ ಪ್ರದೇಶ (ಶೇ. 103.46ದಲ್ಲಿ) ಬಿತ್ತನೆಯಾಗಿದೆ.
ಲೋಕದರ್ಶನ ವರದಿ
ಲೋಕದರ್ಶನ ವರದಿ
ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಬಿತ್ತನೆ ಗುರಿಗಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ; ಜಿಲ್ಲೆಯಲ್ಲಿ ನ್ಯಾನೊ ರಸಗೊಬ್ಬರ ಬಳಕೆ ಹೆಚ್ಚುತ್ತಿದ್ದು, ರೈತರು ಕಾಳುಗೊಬ್ಬರ ಮಿತವಾಗಿ ಬಳಸಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 03: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿಯವರೆಗೆ 2.81 ಲಕ್ಷ ಹೆಕ್ಟೆರ್ ಪ್ರದೇಶದ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟರ್ ಪ್ರದೇಶ (ಶೇ. 103.46ದಲ್ಲಿ) ಬಿತ್ತನೆಯಾಗಿದೆ. ಸಮಪರ್ಕವಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ನ್ಯಾನೊ ರಸಗೊಬ್ಬರ ಬಳಕೆ ವರ್ಷದಿಂದ ವರ್ಷಕ್ಕೆ
ಹೆಚ್ಚುತ್ತಿದ್ದು, ಮತ್ತು ಇದು ರೈತ ಸ್ನೇಹಿಯಾಗಿದ್ದು, ಕಾಳುಗೊಬ್ಬರವನ್ನು ಮಿತವಾಗಿ ಬಳಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು (ಆ.2) ರಂದು ಕೃಷಿ ಇಲಾಖೆಯಿಂದ ಮರೆವಾಡ ಗ್ರಾಮದ ರೈತ ರಾಯಣ್ಣ ಹುರಳಿ ಅವರ ತೋಟದಲ್ಲಿ ಬೆಳೆಗಳಿಗೆ ನ್ಯಾನೋ ಯೂರಿಯಾ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆಯ ಪ್ರಾತ್ಯಕ್ಷಿಕೆಯನ್ನು ರೈತರೊಂದಿಗೆ ಪರೀಶೀಲಿಸಿದ ನಂತರ ಮಾತನಾಡಿದರು.
ಮಣ್ಣಿನ ರಸವತ್ತಿತೆ ಹಾಗೂ ಫಲವತ್ತತೆ ಹಾಳಾಗದಂತೆ ಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು. ಅನಗತ್ಯವಾಗಿ ಹೆಚ್ಚುವರಿ ರಸಗೊಬ್ಬರಗಳನ್ನು, ರಾಸಾಯನಿಕಗಳನ್ನು ಬೆಳೆಗಳಿಗೆ, ಭೂಮಿಗೆ ಬಳಸುವದರಿಂದ ಆಹಾರ, ವಾತಾವರಣ ಮತ್ತು ಜಲ ಮಲೀನವಾಗುತ್ತದೆ. ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನ್ಯಾನೊ ರಸಗೊಬ್ಬರ ಬಳಸುವದರಿಂದ ಪರಿಸರ ಮಾಲಿನ್ಯ ಮತ್ತು ಹೆಚ್ಚು ಖರ್ಚನ್ನು ತಡೆಯಬಹುದಾಗಿದೆ. ಜಿಲ್ಲೆಯಲ್ಲಿ 2024-25 ನೇ ಸಾಲಿನ ಜುಲೈ ಅಂತ್ಯಕ್ಕೆ 6500 ಲೀಟರ್ ಅಂದರೆ 13 ಸಾವಿರ ಬಾಟಲ್ ನ್ಯಾನೊ ಯೂರಿಯಾ ಮಾರಾಟವಾಗಿದೆ. ಪ್ರಸಕ್ತ ವರ್ಷ 14400 ಲೀಟರ್ ಅಂತೆ 28800 ಬಾಟಲ್ ನ್ಯಾನೊ ಯೂರಿಯಾ ಮಾರಾಟವಾಗಿದೆ. ಇದು ಸಾಂಪ್ರಾದಿಯಿಕ ಯೂರಿಯಾಗಿಂತ 8 ರಿಂದ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತವಾಗಿ ಪೋಷಕಾಂಶಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 2,91,182 ಪ್ಲಾಟಗಳಲ್ಲಿ ಮುಂಗಾರು ಹಂಗಾಮಿಗಾಗಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಇಲ್ಲಿಯವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 390 ಖಾಸಗಿ ನಿವಾಸಿಗಳ ಮೂಲಕ 2,06,754 ಪ್ಲಾಟಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸ್ವತಃ ರೈತರೆ 5029 ಪ್ಲಾಟ್ಗಳಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಗಳ ಮಾಹಿತಿಯನ್ನು ದಾಖಲಿಸಿದ್ದಾರೆ. ಬೆಳೆ ಸಮೀಕ್ಷೆಯು ಸರ್ಕಾರವು ನೀಡಿರುವ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲೆಯ ಮಳೆ ಮಾಹಿತಿ: ಪ್ರಸ್ತುತ 2025-26 ನೇ ಸಾಲಿನಲ್ಲಿ ಪೂರ್ವ ಮುಂಗಾರು (ಮಾರ್ಚ 1 ರಿಂದ ಮೇ 31 ವರೆಗೆ) 120.4 ಮಿಮೀ ವಾಡಿಕೆ ಮಳೆಗೆ, ವಾಸ್ತವಿಕವಾಗಿ 224.8 ಮಿಮೀ ಮಳೆಯಾಗಿದ್ದು, ಶೇ.87 ರಷ್ಟು ಹೆಚ್ಚಿನ ಮಳೆಯಾಗಿದೆ. ಹಾಗೂ ಮುಂಗಾರಿನಲ್ಲಿ ಜುಲೈ 31 ರವರೆಗೆ 275.1 ಮಿಮೀ ವಾಡಿಕೆ ಮಳೆಗೆ 265.3 ಮಿಮೀ ಮಳೆಯಾಗಿದ್ದು, ಶೇ.4 ರಷ್ಟು ಕೊರೆತೆಯಾಗಿದೆ.
ಮುಂಗಾರು ಮಳೆ ಪ್ರಮಾಣ: ಜೂನ್ 1 ರಿಂದ ಅಗಸ್ಟ್ 2, 2025 ರವರೆಗೆ ಧಾರವಾಡ ತಾಲೂಕಿನಲ್ಲಿ 278.4 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 274.2 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 2 ಮಿಮೀ ರಷ್ಟು ಮಳೆ ಕೊರತೆಯಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ 273.1 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 257 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 6 ಮಿಮೀ ರಷ್ಟು ಮಳೆ ಕೊರತೆಯಾಗಿದೆ.
ಕಲಘಟಗಿ ತಾಲೂಕಿನಲ್ಲಿ 412 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 274.5 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದ್ದು, ಶೇ. 33 ಮಿಮೀ ರಷ್ಟು ಮಳೆ ಕೊರತೆಯಾಗಿದೆ.
ಕುಂದಗೋಳ ತಾಲೂಕಿನಲ್ಲಿ 202.3 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 254.2 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 26 ಮಿಮೀ ರಷ್ಟು ಹೆಚ್ಚುವರಿ ಮಳೆಯಾಗಿದೆ.
ನವಲಗುಂದ ತಾಲೂಕಿನಲ್ಲಿ 167.4 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 245.5 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 47 ಮಿಮೀ ರಷ್ಟು ಹೆಚ್ಚುವರಿ ಮಳೆಯಾಗಿದೆ.
ಹುಬ್ಬಳ್ಳಿ ನಗರ 243.4 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 278.4 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 14 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಅಳ್ಳಾವರ ತಾಲೂಕಿನಲ್ಲಿ 647.5 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 432.4 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದ್ದು, ಶೇ.33 ರಷ್ಟು ಮಳೆ ಕೊರತೆಯಾಗಿದೆ.
ಅಣ್ಣಿಗೇರಿ ತಾಲೂಕಿನಲ್ಲಿ 177 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 192.8 ಮಿಮೀ ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ. 9 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಒಟ್ಟಾರೆಯಾಗಿ ಜೂನ್ 1 ರಿಂದ ಅಗಸ್ಟ್ 2 ರವರೆಗೆ ಜಿಲ್ಲೆಯಲ್ಲಿ 285.1 ಮಿಮೀ ಆಗಬೇಕಿದ್ದ ವಾಡಿಕೆ ಮಳೆಗೆ, 266.8 ರಷ್ಟು ವಾಸ್ತವಿಕವಾಗಿ ಮಳೆಯಾಗಿದೆ. ಶೇ.6 ರಷ್ಟು ಕಡಿಮೆ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಬಿತ್ತನೆ ಬೀಜ: 2025-26 ನೇ ಸಾಲಿನಲ್ಲಿ ಸೋಯಾಅವರೆ 8,926.5 ಕ್ವಿಂಟಾಲ್, ಮುಸುಕಿನ ಜೋಳ 2,743.9 ಕ್ವಿಂಟಲ್, ಶೇಂಗಾ 96.9 ಕ್ವಿಂಟಲ್, ಹೆಸರು 719.75 ಕ್ವಿಂಟಲ್, ಉದ್ದು 473.8 ಕ್ವಿಂಟಲ್, ಭತ್ತ 159.5 ಕ್ವಿಂಟಲ್, ತೊಗರಿ 22.7 ಕ್ವಿಂಟಲ್. ಒಟ್ಟಾರೆಯಾಗಿ 13,143.05 ಕ್ವಿಂಟಲ್ ನಷ್ಟು ಬಿತ್ತನೆ ಬೀಜಗಳು ವಿತರಣೆಯಾಗಿದೆ.
ಕೃಷಿ ಬಿತ್ತನೆ: ಜಿಲ್ಲೆಯಲ್ಲಿ ಕೃಷಿ ಬೆಳೆಗಳ 2.81 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟೇರ್ ಪ್ರದೇಶ (ಶೇ.103.46) ಬಿತ್ತನೆ ಆಗಿದೆ. ಹಾಗೂ ತೋಟಗಾರಿಕೆ ಬೆಳೆಗಳ 24173 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿಗೆ 10569 ಹೆಕ್ಟೇರ್ (ಶೇ.43) ಪ್ರದೇಶ ಬಿತ್ತನೆ ಆಗಿದೆ.
ಧಾರವಾಡ ಜಿಲ್ಲೆಯಲ್ಲಿ ಹೆಸರು 97,406 ಹೆಕ್ಟೇರ್, ಮುಸುಕಿನ ಜೋಳ 71,072 ಹೆಕ್ಟೇರ್, ಸೋಯಾ ಅವರೆ 41,882 ಹೆಕ್ಟೇರ್, ಹತ್ತಿ 35,820 ಹೆಕ್ಟೇರ್, ಉದ್ದು 16,276 ಹೆಕ್ಟೇರ್, ಕಬ್ಬು 10,461 ಹೆಕ್ಟೇರ್, ಭತ್ತ 95,63 ಹೆಕ್ಟೇರ್, ಶೇಂಗಾ 8,635 ಹೆಕ್ಟೇರ್, ತೊಗರಿ 135 ಹೆಕ್ಟೇರ್, ಇತರೆ ಕೃಷಿ ಬೆಳೆ 90 ಹೆಕ್ಟೇರ್ ಒಟ್ಟು ಕೃಷಿ ಬೆಳೆಯು 2,91,340 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ತೋಟಗಾರಿಕೆ ಬೆಳೆ: ಧಾರವಾಡ ಜಿಲ್ಲೆಯಲ್ಲಿ ಮೆಣಸಿನಕಾಯಿ 4,432 ಹೆಕ್ಟೇರ್, ಈರುಳ್ಳಿ 4,968 ಹೆಕ್ಟೇರ್, ಇತರೆ ತೋಟಗಾರಿಕೆ ಬೆಳೆ 1,169 ಹೆಕ್ಟೇರ್ ಹೀಗೆ ಒಟ್ಟು ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯು 10,569 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಸಗೊಬ್ಬರ: ಜುಲೈ ತಿಂಗಳ ಅಂತ್ಯದವರೆಗೆ ಯೂರಿಯಾ 17224 ಮೆ.ಟನ್, ಡಿ.ಎ.ಪಿ 9845 ಮೆ. ಟನ್. ಪೊಟಾಷ್ 542 ಮೆ.ಟನ್ . ಕಾಂಪ್ಲೆಕ್ಸ್ 4580 ಮೆ.ಟನ್ ಹಾಗೂ ಎಸ್. ಎಸ್. ಪಿ 226 ಮೆ.ಟನ್ ಗುರಿ ಇದ್ದು. ಯೂರಿಯಾ 23333 ಮೆ.ಟನ್, ಡಿ.ಎ.ಪಿ 8800 ಮೆ. ಟನ್. ಪೊಟಾಷ್ 2846 ಮೆ.ಟನ್. ಕಾಂಪ್ಲೆಕ್ಸ್ 20857 ಮೆ.ಟನ್ ಹಾಗೂ ಎಸ್.ಎಸ್.ಪಿ 823 ಮೆ.ಟನ್ ಪೂರೈಕೆಯಾಗಿರುತ್ತದೆ.
ಯೂರಿಯಾ 21705 ಮೆ.ಟನ್, ಡಿ.ಎ.ಪಿ 7227 ಮೆ. ಟನ್. ಪೊಟಾಷ್ 898 ಮೆ.ಟನ್. ಕಾಂಪ್ಲೆಕ್ಸ್ 16733 ಮೆ.ಟನ್ ಹಾಗೂ ಎಸ್.ಎಸ್.ಪಿ 579 ಮೆ.ಟನ್ ಮಾರಾಟವಾಗಿರುತ್ತದೆ. ಯೂರಿಯಾ 2099 ಮೆ.ಟನ್, ಡಿ.ಎ.ಪಿ 1495 ಮೆ.ಟನ್. ಪೊಟಾಷ್ 1330 ಮೆ.ಟನ್. ಕಾಂಪ್ಲೆಕ್ಷ 4900 ಮೆ.ಟನ್ ಹಾಗೂ ಎಸ್.ಎಸ್.ಪಿ 282 ಮೆ.ಟನ್ ದಾಸ್ತಾನಿಕರಿಸಲಾಗಿರುತ್ತದೆ. ಅಗಸ್ಟ್ ಅಂತ್ಯಕ್ಕೆ ಯೂರಿಯಾ 22879 ಮೆ.ಟನ್, ಡಿ.ಎ.ಪಿ 11647 ಮೆ.ಟನ್. ಪೊಟಾಷ್ 680 ಮೆ.ಟನ್ ಕಾಂಪ್ಲೆಕ್ಸ್ 5805 ಮೆ.ಟನ್ ಹಾಗೂ ಎಸ್.ಎಸ್.ಪಿ 280 ಮೆ.ಟನ್ ಗುರಿ ಇರುತ್ತದೆ.
ಮುಂಗಾರು ಹಂಗಾಮಿನ ರಸಗೊಬ್ಬರ ಬೇಡಿಕೆ ಮತ್ತು ದಾಸ್ತಾನು ವಿವರ:
ಯೂರಿಯಾ: 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರವು 28,266 ಮೆ.ಟನ್ ಬೇಡಿಕೆ ಇದ್ದು, ಒಟ್ಟು 23,533 ಮೆ.ಟನ್ ರಸಗೊಬ್ಬರದ ಆರಂಭಿಕ ಶಿಲ್ಕು ಮತ್ತು ಸರಬರಾಜು ಆಗಿತ್ತು. ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 21,958 ಮೆ.ಟನ್ ಯೂರಿಯಾ ರಸಗೊಬ್ಬರ ಮಾರಾಟವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನ್ಯಾನೊ ಯೂರಿಯಾ : ಜಿಲ್ಲೆಯಲ್ಲಿ 2024-25 ನೇ ಸಾಲಿನ ಜುಲೈ ಅಂತ್ಯಕ್ಕೆ 6500 ಲೀಟರ್ (13000 ಬಾಟಲ್) ನ್ಯಾನೊ ಯೂರಿಯಾ ಮಾರಾಟವಾಗಿದೆ. ಪ್ರಸ್ತುತ ಸಾಲಿನಲ್ಲಿ 14400 ಲೀಟರ್ (28800 ಬಾಟಲ್) ನ್ಯಾನೊ ಯೂರಿಯಾ ಮಾರಾಟವಾಗಿರುತ್ತದೆ. ನ್ಯಾನೊ ಯೂರಿಯಾ ಸಾಂಪ್ರದಾಯಿಕ ಯೂರಿಯಾಗಿಂತ 8 ರಿಂದ 10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತವಾಗಿ ಪೋಷಕಾಂಶಗಳನ್ನು (ಸಾರಜನಕ) ಲಭ್ಯವಾಗಿಸುತ್ತದೆ. ಡೋನ್ ಮೂಲಕ ನ್ಯಾನೊ ಯೂರಿಯಾ ಸಿಂಪರಣೆ ಮಾಡಿದ್ದಲ್ಲಿ ಒಂದು ಎಕರೆ ಜಮೀನಿಗೆ ಅಂದಾಜು 7 ನಿಮಿಷದಲ್ಲಿ ಸಿಂಪರಣೆ ಮಾಡಬಹುದಾಗಿದ್ದು ಸಮಯದ ಹಾಗೂ ಕೃಷಿ ಕೂಲಿಕಾರ್ಮಿಕರ ಅಭಾವವನ್ನು ನೀಗಿಸಬಹುದಾಗಿದೆ. ಅಲ್ಲದೇ ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಮಣ್ಣಿನ ಗುಣಮಟ್ಟ ಹಾಳಾಗುವುದರ ಜೊತೆಗೆ ಅಂತರ್ಜಲ ಕಲೂಷಿತಗೊಂಡು ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಸಹ ಕಡಿಮೆಗೊಳಿಸಬಹುದಾಗಿದೆ. ನ್ಯಾನೊ ಯೂರಿಯಾ ಸಿಂಪರಣೆಯಿಂದ ಕಳೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಕೃಷಿ ಇಲಾಖೆ ವಿವಿಧ ಯೋಜನೆಗಳ ಕುರಿತು ಹಾಗೂ ನ್ಯಾನೊ ರಸಗೊಬ್ಬರ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆ ಆ್ಯಪ್ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಜಿಲ್ಲಾ ಸಂಖ್ಯಾ ಮತ್ತು ಆರ್ಥಿಕ ಅಧಿಕಾರಿ ವೀರಣ್ಣಗೌಡ ಪಾಟೀಲ, ಸಹಾಯಕ ನಿರ್ದೇಶಕ ರಾಜಶೇಖರ ಆನಗೌಡರ, ಧಾರವಾಡ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಮಲ್ಲಿನಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಕುಂದಗೋಳ, ಬಸವರಾಜ ಬಂಡಿವಾಡ, ತಮ್ಮಣ್ಣ ಗುಂಡಗೋವಿ, ಬೀಮಣ್ಣ ಕಸಾಯಿ, ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಮಹಾದೇವ ಸರಶಟ್ಟಿ ಸೇರಿದಂತೆ ವಿವಿಧ ಪ್ರಗತಿಪರ ರೈತರು, ಗ್ರಾಮಸ್ಥರು, ಮರೆವಾಡ, ಅಮ್ಮಿನಭಾವಿ ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.