ಯರಗಟ್ಟಿ

ಮಾದಕ ವಸ್ತುಗಳ ಸೇವನೆ ಸಾವನ್ನು ಆಹ್ವಾನಿಸಿದಂತೆ : ಪಿಎಸ್‌ಐ ಹಿರೇಗೌಡರ

ಮಾದಕ ವಸ್ತುಗಳ ಸೇವನೆ ಸಾವನ್ನು ಆಹ್ವಾನಿಸಿದಂತೆ : ಪಿಎಸ್‌ಐ ಹಿರೇಗೌಡರ

ಯರಗಟ್ಟಿ 26: ಪಟ್ಟಣದ ಸಿ. ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮುರಗೋಡ ಪೊಲೀಸ್ ಠಾಣೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಸ್‌ಐ ಆಯ್ ಎಂ ಹಿರೇಗೌಡರ ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. 

ಡ್ರಗ್ಸ್‌ನಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು  ಹದಗೆಡಿಸುತ್ತಿದೆ. ಇದರಿಂದ ನಾನಾ ಮಂದಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವಾಗಿದೆ ಇದನ್ನು ಪ್ರತಿ ವರ್ಷ ಜೂನ್ 26 ರಂದು ಮಾದಕ ವ್ಯಸನ ಮುಕ್ತ ಜಗತ್ತನ್ನು ನಿರ್ಮಿಸಲು ಕ್ರಮ ಮತ್ತು ಸಹಕಾರವನ್ನು ಬಲಪಡಿಸಲು ಆಚರಿಲಾಗುತ್ತದೆ. 

ಪ್ರತಿ ವರ್ಷ ಪ್ರಪಂಚದಾದ್ಯಂತದ ವಿವಿಧ ಸಂಸ್ಥೆಗಳು ವಿಶ್ವ ಮಾದಕವಸ್ತು ವಿರೋಧಿ ದಿನವನ್ನು ಆಚರಿಸುತ್ತವೆ. ಜೊತೆಗೆ ಸಮಾಜಕ್ಕೆ ನಿಷೇಧಿತ ಮಾದಕವಸ್ತುಗಳು ಉಂಟುಮಾಡುವ ಪ್ರಮುಖ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದು ಹೇಳಿದರು. 

ಪ್ರಾಚಾರ್ಯರಾದ ಪ್ರೊ. ಆರ್‌.ಎಸ್‌. ಮರಿಗೌಡರ ಮಾತನಾಡಿದ ಅವರು ಮಾದ ವಸ್ತು ನಮ್ಮ ದೇಹಕ್ಕೆ ಮಾತ್ರ ಹಾನಿ ಮಾಡುತ್ತದೆ ಎಂದು ಅನೇಕ ಮಂದಿ ಅಂದುಕೊಂಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಹೆಚ್ಚು ಆಲ್ಕೋಹಾಲ್ ಅಥವಾ ಸಿಗರೇಟ್ ಕುಡಿಯುವ ಅಭ್ಯಾಸ ಹೊಂದಿರುವವರು ಅಥವಾ ಡ್ರಗ್ಸ್‌ ಸೇವಿಸುವವರ ಮಾನಸಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಾರೆ ಎಂದು ಕೆಲವು ವರದಿಗಳು ತಿಳಿಸಿದೆ. ಇವುಗಳ ಸೇವನೆಯಿಂದ ಅಮಲೇರುವ ಕಾರಣ ಒತ್ತಡ, ಖಿನ್ನತೆ, ತಲೆನೋವು ಅಥವಾ ಮೈಗ್ರೇನ್‌ನಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ ಮತ್ತು ಸಮಯಕ್ಕೆ ಡ್ರಗ್ಸ್‌ ಪಡೆಯದಿದ್ದರೆ, ಅವರು ಮಾನಸಿಕ ಅಸ್ವಸ್ಥರಾಗಬಹುದು ಅಥವಾ ಹುಚ್ಚರಾಗಬಹುದು ಎಂದರು. 

ಉಪನ್ಯಾಸಕರಾದ ಡಾ. ಸುನಂದಾ ಮಾದರ, ಡಾ. ರಾಜಶೇಖರ ಬಿರಾದಾರ, ಮಹಾಂತೇಶ ತಂಬಾಕೆ, ಮರಿಗೌಡ ಚೋಬಾರಿ, ಬಸವರಾಜ ಬೀಳಗಿ, ಮಹೇಶ ಮಗದುಮ, ಯಲ್ಲಪ್ಪ ಭರಮಣ್ಣವರ ಸೇರಿದಂತೆ ವಿದ್ಯಾರ್ಥಿಗಳ ಇದ್ದರು. 


ಸುದ್ದಿ ಓದಿ