ಸಚಿವ ಸಂಪುಟ ಉಪಸಮಿತಿಯಿಂದ ಬರ ಅಧ್ಯಯನ ಬರ ಪ್ರದೇಶದಲ್ಲಿ ಉದ್ಯೋಗಖಾತ್ರಿಯಡಿ ಹೆಚ್ಚುವರಿ ಕೆಲಸ ನೀಡಲು ನಿಧರ್ಾರ: ಬಂಡೆಪ್ಪ ಖಾಶೆಂಪುರ

ಸಚಿವ ಸಂಪುಟ ಉಪಸಮಿತಿಯಿಂದ ಬರ ಅಧ್ಯಯನ  ಬರ ಪ್ರದೇಶದಲ್ಲಿ ಉದ್ಯೋಗಖಾತ್ರಿಯಡಿ ಹೆಚ್ಚುವರಿ ಕೆಲಸ ನೀಡಲು ನಿಧರ್ಾರ: ಬಂಡೆಪ್ಪ ಖಾಶೆಂಪುರ

ಬಳ್ಳಾರಿ 31:ರಾಜ್ಯದಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ಇದ್ದು, ನರೇಗಾ ಯೋಜನೆಯಡಿ 150 ದಿನಗಳ ಉದ್ಯೋಗವನ್ನು ಈಗಾಗಲೆ ಪೂರ್ಣಗೊಳಿಸಿರುವ ಕುಟುಂಬಗಳಿಗೆ ಹೆಚ್ಚುವರಿಯಾಗಿ ಬೇಡಿಕೆಗೆ ಅನುಗುಣವಾಗಿ ಉದ್ಯೋಗವನ್ನು ನೀಡಲು ನಿರ್ಧರಿಸಲಾಗಿದ್ದು, ಇದರ ವೆಚ್ಚವನ್ನು ರಾಜ್ಯ ಸಕರ್ಾರವೇ ಭರಿಸಲಿದೆ.  ವಿಭಾಗದ ಬರ ಪರಿಸ್ಥಿತಿ ಅಧ್ಯಯನದ ವರದಿಯನ್ನು ಫೆ.5 ರೊಳಗೆ ಸಕರ್ಾರಕ್ಕೆ ಸಲ್ಲಿಸಲಾಗುವುದು ಎಂದು ಗುಲಬಗರ್ಾ ವಿಭಾಗದ ಬರ ಅಧ್ಯಯನದ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು ಹೇಳಿದರು.

  ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ರಾಜ್ಯ ಸಕರ್ಾರ ರಚಿಸಿರುವ ಗುಲಬಗರ್ಾ ವಿಭಾಗದ ಸಚಿವ ಸಂಪುಟ ಉಪಸಮಿತಿಯ ವತಿಯಿಂದ, ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಅಡಬೂರು ಗ್ರಾಮದ ಭರಮಪ್ಪ ರೆಡ್ಡಿ ಎಂಬ ರೈತನ ಹೊಲಕ್ಕೆ ತೆರಳಿ, ಬರ ಪರಿಸ್ಥಿತಿಯಿಂದ ಹಾನಿಗೊಳಗಾಗಿರುವ ಬೆಳೆಯ ಪರಿಶೀಲನೆ ನಡೆಸಿದ ಬಳಿಕ, ರೈತರನ್ನುದ್ದೇಶಿಸಿ ಅವರು ಮಾತನಾಡಿದರು.

     ಇದಕ್ಕೂ ಮೊದಲು ಸಚಿವರು ರೈತರ ಅಹವಾಲು ಆಲಿಸಿದರು. ಅಡಬೂರು ಗ್ರಾಮದ ರೈತ ಸಿದ್ದೇಶ್ ಅವರು ಮಾತನಾಡಿ, ಗ್ರಾಮದಲ್ಲಿ ಬಹಳಷ್ಟು ಬಡ ಕುಟುಂಬಗಳಿದ್ದು, ನರೇಗಾ ಯೋಜನೆಯಡಿ ಈಗಾಗಲೆ 150 ದಿನಗಳ ಕೆಲಸ ಪೂರ್ಣಗೊಳಿಸಲಾಗಿದೆ.  ಹೀಗಾಗಿ ಬಹಳಷ್ಟು ಕುಟುಂಬಗಳು ಉದ್ಯೋಗವಿಲ್ಲದೆ ತೊಂದರೆ ಎದುರಿಸುತ್ತಿದ್ದಾರೆ.  ಅಲ್ಲದೆ ಯೋಜನೆಯಡಿ ದಿನಕ್ಕೆ ರೂ. 249 ರಂತೆ ಕೂಲಿ ಮೊತ್ತ ನೀಡುತ್ತಿರುವುದು ಬಹಳಷ್ಟು ಕಡಿಮೆ ಇದೆ.  ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.  ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಬೇಳೆಯನ್ನು ನೀಡುತ್ತಿದ್ದರೂ, ಉಳಿದ ಸಾಮಗ್ರಿಗಳನ್ನು ಪಡೆಯಲು ಆಥರ್ಿಕ ತೊಂದರೆ ಎದುರಿಸುವಂತಾಗಿದೆ.  ದಯವಿಟ್ಟು ಬಡ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗ ನೀಡಬೇಕು.  ಹಾಗೂ ಕೂಲಿ ಮೊತ್ತವನ್ನೂ ಹೆಚ್ಚಿಸಬೇಕು, ಇದರಿಂದ ಬಡ ಕುಟುಂಬಗಳಿಗೆ ಆಥರ್ಿಕ ಆಸರೆಯಾಗಲಿದೆ ಎಂದು ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಂಡೆಪ್ಪ ಖಾಶೆಂಪುರ ಅವರು,   ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ನೀಡಲು ಅವಕಾಶವಿದೆ.  ಆದರೆ ಬರ ಪೀಡಿತ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 150 ದಿನಗಳ ಉದ್ಯೋಗ ನೀಡಲು ಯೋಜನೆಯನ್ನು ವಿಸ್ತರಿಸಲಾಗಿತ್ತು.  ಆದರೆ ರಾಜ್ಯದ 175 ತಾಲ್ಲೂಕುಗಳ ಪೈಕಿ ಈಗಾಗಲೆ 156 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ತೀವ್ರಗೊಳಿಸಲಾಗಿದೆ.  ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು, ಹೆಚ್ಚು ಕೆಲಸವನ್ನು ನೀಡಲಾಗುತ್ತಿದೆ.  ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವುದು ಸಕರ್ಾರದ ಗಮನಕ್ಕೆ ಬಂದಿದ್ದು, ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳ ಉದ್ಯೋಗ ಪೂರ್ಣಗೊಳಿಸಿರುವ ಕುಟುಂಬಗಳಿಗೂ, ಹೆಚ್ಚುವರಿಯಾಗಿ ಇನ್ನಷ್ಟು ದಿನಗಳ ಉದ್ಯೋಗವನ್ನು ಬೇಡಿಕೆಗೆ ಅನುಗುಣವಾಗಿ ನೀಡಲು ನಿರ್ಧರಿಸಲಾಗಿದೆ.  ಯಾರೇ ಉದ್ಯೋಗಕ್ಕಾಗಿ ಮನವಿ ಸಲ್ಲಿಸದರೂ, ವಾಪಸ್ ಕಳುಹಿಸದೆ, ಅವರಿಗೆ ಉದ್ಯೋಗ ನೀಡಲಾಗುವುದು.  ಹೆಚ್ಚುವರಿ ದಿನಗಳ ಉದ್ಯೋಗದ ಕೂಲಿ ನೀಡಲು ತಗಲುವ ವೆಚ್ಚವನ್ನು ರಾಜ್ಯ ಸಕರ್ಾರವೇ ಭರಿಸಲಿದೆ ಎಂದು ತಿಳಿಸಿದ ಸಚಿವರು, ಕೂಡಲೆ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ದಿನಗಳ ಉದ್ಯೋಗವನ್ನು ನಾಳೆಯಿಂದಲೇ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಆದೇಶಿಸಿದರು.

ಭರಮರೆಡ್ಡಿ ಅವರ ಹೊಲದಲ್ಲಿ ಮಳೆ ಕೊರತೆಯಿಂದ ಹಾಳಾಗಿದ್ದ ಸೂರ್ಯಕಾಂತಿ, ಬಿಳಿ ಜೋಳದ ಬೆಳೆಯನ್ನು ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

  ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ, ಮುಜರಾಯಿ ಖಾತೆ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕ ಭೀಮಾನಾಯಕ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನಕಾರ್ಯದಶರ್ಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಜಿ. ಕುಮಾರನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ನಿತೀಶ್ಕುಮಾರ್, ಹೊಸಪೇಟೆ ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಇದ್ದರು. 


ಸುದ್ದಿ ಓದಿ