ಯರಗಟ್ಟಿ

ರೈತರ ಮೇಲಿರುವ ಪೊಲೀಸ ಪ್ರಕರಣಗಳನ್ನು ಕೈ ಬಿಡಿ: ಬಾಳಿ

ರೈತರ ಮೇಲಿರುವ ಪೊಲೀಸ ಪ್ರಕರಣಗಳನ್ನು ಕೈ ಬಿಡಿ: ಬಾಳಿ

ಲೋಕದರ್ಶನ ವರದಿ

ಯರಗಟ್ಟಿ 22: ರೈತರ ಮೇಲೆ ದೌರ್ಜನ್ಯ ಅಥವಾ ಅನ್ಯಾಯವಾದರೆ ಅದು ಒಂದು ಸ್ಥಳಕ್ಕೆ ಮಾತ್ರ ಸೀಮಿತವಾಗದೇ ರಾಜ್ಯ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ ನಡೆದು ಸರಕಾರಗಳೇ ಬದಲಿಯಾದ ಉದಾಹರಣೆಗಳು ನಮ್ಮ ಮುಂದಿವೆ. ನರಗುಂದ ಬಂಡಾಯ ಇದಕ್ಕೊಂದು ನಿದರ್ಶನ.  ನಮ್ಮ ಜಿಲ್ಲೆಯಲ್ಲಿ ಈ ಸಲ ಮಳೆ ಸರಿಯಾಗಿ ಆಗದಿರುವುದರಿಂದ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ರೈತರ ಮೇಲಿರುವ ಪೊಲೀಸ ಪ್ರಕರಣಗಳನ್ನು ಕೈ ಬಿಡಬೇಕು ಎಂದು ಮುಖಂಡ ಉಮೇಶ ಬಾಳಿ ಹೇಳಿದರು.

ಸಮೀಪದ ಮುನವಳ್ಳಿ ಪಟ್ಟಣದ ಸಾವಳಗಿ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

    ಸಾನಿಧ್ಯ ವಹಿಸಿದ  ಮುರುಘೇಂದ್ರ ಸ್ವಾಮೀಜಿಯವರು ಮಾತನಾಡುತ್ತ ಮುಂಬರುವ ದಿನಗಳಲ್ಲಿ ಹುತಾತ್ಮ ದಿನಾಚರಣೆ ಆಚರಿಸವುದರ ಜೊತೆಗೆ ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ಯಾಗಿ, ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಬೇಕು. ಅನ್ನದಾತ ಸುಖದಿಂದ ಇದ್ದರೆ ಎಲ್ಲರೂ ಸುಖದಿಂದ ಇದ್ದಂತೆ ಎನ್ನುವ ಮಾತನ್ನು ಮರೆಯಬಾರದು ಎಂದರು.

 ಮುಖಂಡರಾದ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಕೆಲ ವರ್ಷಗಳ ಹಿಂದೆ ಸತತ ಮಳೆಯಾಗಿದ್ದರಿಂದ ಕಳಸಾ ಬಂಡೂರಿ ನದಿ ಜೋಡಣೆ ಕುರಿತು ಮಾತನಾಡುವುದು ಕಡಿಮೆಯಾಗಿತ್ತು ಈಗ ಮತ್ತೆ ಮಳೆ ಕಡಿಮೆಯಾಗಿರುವುದರಿಂದ ನದಿ ಜೋಡಣೆಯಾಗಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ ಎಂದರು. 

ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ ರೈತರು ಹೋರಾಟಕ್ಕೆ ಮನಸ್ಸು ಮಾಡುವುದಿಲ್ಲ ಹೋರಾಟ ಮಾಡಿದರೆ ಜೀವದ ಹಂಗು ತೊರೆದು ಹೋರಾಟ ಮಾಡುತ್ತಾರೆ ಎಂದರು. 

ಕಾರ್ಯಕ್ರಮದಲ್ಲಿ ರೈತ ಮಹಿಳೆ ಅನುಸೂಯಾ ಬಸವರಾಜ ಹನಸಿ ಹಾಗೂ  ಶಂಕರಗೌಡ ರಾಮನಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು. ಬಾಳಪ್ಪ ರಡ್ರಟ್ಟಿ, ಮುತ್ತಣ್ಣ ಘಟವಾಳಿಮಠ, ಪ್ರಕಾಶ ಕಾಮಣ್ಣವರ, ರವಿ ದ್ಯಾಮನಗೌಡರ, ಕಲ್ಲಪ್ಪ ನಲವಡೆ, ರಾಮನಗೌಡ ಗೀದಿಗೌಡ್ರ, ಬಾಳು ಹೊಸಮನಿ, ದ್ಯಾಮನಗೌಡ ಬಕಾಡೆ, ಮನೋಹರ ನಾಯ್ಕ, ಶಿವಪುತ್ರಪ್ಪ ಕೆಳಗಡೆ, ಜಯಪ್ಪ ಹಂಜಿ, ಪ್ರದೀಪ ದಿವಟಗಿ, ರವಿ ಹುರಳಿ, ಮಾರುತಿ ನರಗುಂದ, ಹನಮಂತ ಹಡಪದ, ಈರಣ್ಣ ಬಸಳಿಗುಂದಿ ಸೇರಿದಂತೆ ಇತರರು ಇದ್ದರು 

ಸುದ್ದಿ ಓದಿ