ವಿಶ್ವ ಜನಸಂಖ್ಯೆ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಶಿಗ್ಗಾವಿ 16: ಜನಸಂಖ್ಯೆ ನಿಯಂತ್ರಣಕ್ಕಾಗಿ ಕುಟುಂಬ ಕಲ್ಯಾಣ ಯೋಜನೆಗಳ್ನು ಅನುಸರಿಸಬೇಕು ಮದುವೆಯಾದ ನಂತರ ಕನಿಷ್ಠ ಮೂರು ವರ್ಷಗಳವರಿಗೆ ಮಗುವನ್ನು ಪಡೆಯಬಾರದು ಒಂದು ಮಗು ಪಡೆದು ಎರಡನೇ ಮಗುವಿಗೆ ಸುಮಾರು ನಾಲ್ಕು ವರ್ಷ ಅಂತರ ಇರಬೇಕು ಎಂದು ತಾಲೂಕ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಪಿ.ಹೆಚ್ ಹೇಳಿದರು
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಜನಸಂಖ್ಯೆ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದು ಹೇಳಿದರು.
ಪ್ರಭಾರ ತಾಲೂಕ ಆರೋಗ್ಯಾಧಿಕಾರಿ ಡಾ. ಮನೋಜ ನಾಯ್ಕ ಮಾತನಾಡಿ ಜನಸಂಖ್ಯೆ ಜಾಸ್ತಿ ಇರುವುದು ಒಂದು ರೀತಿಯಲ್ಲಿ ವರವೂ ಹೌದು ಶಾಪವೂ ಹೌದು ಉತ್ತಮ ಶಿಕ್ಷಣ ನೀಡಿ ಮಾನವ ಸಂಪನ್ಮೂಲವನ್ನಾಗಿ ಬಳಸಿದರೆ ಅದು ವರ ಇಲ್ಲದಿದ್ದರೆ ನಿರುದ್ಯೋಗ ಅಪರಾಧದ ಪ್ರಮಾಣ ಹೆಚ್ಚಳವಾಗಿ ಅದೆ ಶಾಪವಾಗಿ ಪರಿಣಿಮಿಸಬಹುದು ಎಂದರು.
ಹಿರಿಯ ಆರೋಗ್ಯ ನೀರೀಕ್ಷಕ ಶ್ರೀಕಾಂತ ಸರ್ಜಾಪೂರ ಮಾತನಾಡಿ ಮಕ್ಕಳನ್ನು ಹೆರುವದು ಆಯ್ಕೆಯಾಗಿರಬೇಕು ಹೊರತು ಅದು ಅನಿವಾರ್ಯವಾಗಬಾರದು. ಜನಸಂಖ್ಯೆ ಹೆಚ್ಚಳದಿಂದ ಬಡತನ ಹೆಚ್ಚುತ್ತದೆ ಶಿಕ್ಷಣ ಆರೋಗ್ಯ ಇತರೆ ಸಂಪನ್ಮೂಲಗಳು ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿ, ಶಂಕ್ರಮ್ಮ ಕಟ್ಟಿಮನಿ, ಲಕ್ಷ್ಮಿ ಪಾಟೀಲ, ಸರೋಜಾ ಹರಿಜನ ಸೇರಿದಂತೆ ಆಶಾ ಕಾರ್ಯಕರ್ತೆಯರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.