ಬ್ಯಾಡ್ಗಿ

ಒಂದನೇ ತರಗತಿಯ ದಾಖಲಾತಿ ಕಾರ್ಯಕ್ರಮಕ್ಕೆ ಚಾಲನೆ

ಒಂದನೇ ತರಗತಿಯ ದಾಖಲಾತಿ ಕಾರ್ಯಕ್ರಮಕ್ಕೆ ಚಾಲನೆ

ಬ್ಯಾಡಗಿ 04:  ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲೀಷ್ ಮಾಧ್ಯಮದಿಂದ ವಂಚಿತರಾಗ ಬಾರದೆಂಬ ಉದ್ದೇಶದಿಂದ ಹಾಗೂ ಗುಣಮಟ್ಟದ ಶಿಕ್ಷಣವನ್ನು ಪೂರೈಸುವ ಉದ್ದೇಶದಿಂದ ಸರ್ಕಾರಗಳು ಶಿಕ್ಷಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ ಎಂದು ಮುಖ್ಯ ಶಿಕ್ಷಕ ಶಂಕರ ಕಿಚಡಿ ಹೇಳಿದರು. 

ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾದ್ಯಮದ ಒಂದನೇ ತರಗತಿ ದಾಖಲಾತಿ ಕಾರ್ಯಕ್ರಮಕ್ಕೆ ಸಂಕ್ಷೀಪ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತಿಚೀನ ದಿನಗಳಲ್ಲಿ ಮಕ್ಕಳು ಇಂಗ್ಲೀಷ್ ಮಾದ್ಯಮ ಶಾಲೆಗಳಿಗೆ ಜೊತುಬಿದ್ದು, ಕನ್ನಡ ಶಾಲೆಯ ಬಗ್ಗೆ ಕಾಳಜಿಯನ್ನು ಕಳೇದುಕೊಂಡಿದ್ದರು. ಇದನ್ನರಿತ ಸರ್ಕಾರಗಳು ಸರ್ಕಾರಿ ಶಾಲೆಯಲ್ಲಿಯೂ ಕೂಡ ಇಂಗ್ಲೀಷ್ ಮಾದ್ಯಮ ಪ್ರಾರಂಭಿಸಲಾಗಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. 

ಕೊರೊನಾ ಮಹಾಮಾರಿ ಇರುವುದರಿಂದ ಶಾಲೆಗಳನ್ನು ಪ್ರಾರಂಭಿಸಲಾಗಿಲ್ಲ. ಒಂದನೇ ತರಗಿಯ ದಾಖಲಾತಿ ಪ್ರಾರಂಭ ಮಾಡಿದ್ದು, ಪಾಲಕರು ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಮಗುವನ್ನು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡುವಂತೆ ಮನವಿ ಮಾಡಿಕೊಂಡರು. 

ಒಂದನೇ ತರಗಿತಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ದೂರ ದರ್ಶನದಲ್ಲಿ ಆನಲೈನ್ ಕ್ಲಾಸ್ ನಡೆಸಲು ಟಿವಿ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ವಿತರಿಸಿರುವುದು ಶ್ಲಾಘನಿಯ. ಅಲ್ಲದೇ ಶಾಲೆಯ ಆವರಣದಲ್ಲಿ ಶಿಕ್ಷಕರೆ ಸ್ವಚ್ಚತೆ ಮಾಡುತ್ತಿರುವುದು ಖಾಸಗಿ ಶಾಲೆಗೆ ಪೈಪೋಟಿ ನೀಡುವಂತಿದೆ. 

ಟಿ.ಎಂ.ಹುಲಮನಿ ಪಾಲಕ. 

ಈ ಸಂದರ್ಭದಲ್ಲಿ ಶಿಕ್ಷಕರಾದ ಸಿ.ಪಿ.ಎರೆಶಿಮಿ, ಎ.ಪಿ.ಪವಾರ, ಎಂ.ಪಿ.ಹಾಲನಗೌಡ್ರ, ಎ.ಸಿ.ರೂಪಾ, ವಿ.ಆರ್‌.ಮಠದ, ಆರ್‌.ಜಿ.ದೆವಗಿರಿಮಠ, ಎಂ.ಎಚ್‌.ಕಂಬಿ, ವಿಜಯಕುಮಾರ ಶಿಡಗನಾಳ, 


ಸುದ್ದಿ ಓದಿ