ಯರಗಟ್ಟಿ

ಕೇಂದ್ರ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ

ಕೇಂದ್ರ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ

ಯರಗಟ್ಟಿ 04: ಸಮೀಪದ ಸೊಪ್ಪಡ್ಲ ಗ್ರಾಮದ ಸರಕಾರಿ ಮಾದರಿ ಕನ್ನಡ ಶಾಲೆಯಲ್ಲಿ ಆಯೋಜಿಸಿದ್ದ ಕೇಂದ್ರ ಮಟ್ಟದ ಕ್ರೀಡಾಕೂಟವನ್ನು ಎಸ್‌ಡಿಎಂಸಿ ಅಧ್ಯಕ್ಷ ದ್ರಾಕ್ಷಾಯಿಣಿ ಮಹಾಲ್ಮನಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳನ್ನು ಗುರುತಿಸುವುದರ ಜತೆಗೆ ಪ್ರೋತ್ಸಾಹಿ ಸಲು ಕ್ರೀಡಾಕೂಟ ಸಹಕಾರಿಯಾಗಿದ್ದು, ಮಕ್ಕಳು ಪಾಠದೊಂದಿಗೆ ಆಟಕ್ಕೂ ಆದ್ಯತೆ ನೀಡಿದಲ್ಲಿ ಮುಂದಿನ ಭವಿಷ್ಯ ಉಜ್ವಲಗೊಳ್ಳುವುದು ಎಂದರು. ಗ್ರಾ.ಪಂ. ಅಧ್ಯಕ್ಷ ಲಕ್ಕವ್ವ ಗೊರಗುದ್ದಿ ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲು ಶಿಕ್ಷಕರು ಶ್ರಮಿಸಬೇಕು ಎಂದರು. 

ಶಿಕ್ಷಕ ಎಂ. ಎಲ್‌. ದಿಲಾವರನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾ. ಪಂ. ಸದಸ್ಯರಾದ ರವಿಕಿರಣ ಪಾಟೀಲ, ಮಹಾದೇವಿ ಕೊಡ್ಲಿವಾಡ, ಮಹಾಂತೇಶ ಕೊಡ್ಲಿವಾಡ, ಕಿರಣ ಹುಣಶ್ಯಾಳ, ಸ್ಥಳಿಯರಾದ ಕರೆಪ್ಪ ಪೂಜೇರ, ಶಂಕರ ದಂಡಿನ, ಮಹಾಂತೇಶ ಕೊಟ್ರಶೆಟ್ಟಿ, ಈರಣ್ಣಾ ಕೂಲಗುಡ, ರಾಜು ಹರಳಿ, ಪ್ರವೀಣ ಮಾದರ ಸೇರಿದಂತೆ ಅನೇಕರು ಹಾಜರಿದ್ದರು. ಶಿಕ್ಷಕ ಆಯ್‌. ಸಿ. ಭರಮನಾಯ್ಕರ ಸ್ವಾಗತಿಸಿದರು. ಸಿ. ಎಸ್‌. ಪಾಟೀಲ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ