ರಾಣೆಬೆನ್ನೂರ

ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ

ಸುಗಮ ಸಂಗೀತ ಕಾರ್ಯಕ್ರಮಕ್ಕೆ  ಚಾಲನೆ

ರಾಣಿಬೆನ್ನೂರ 29:  ತಾಲೂಕಿನ ಯಕಲಾಸಪುರ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಜನನಿ ಜಾನಪದ ಕಲಾ ವೇದಿಕೆ ಯಕಲಾಸಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರ ಇವರ ಸಂಯುಕ್ತಾಶ್ರಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಜಾನಪದ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸಿ.ನಾಗರಜ್ಜಿ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾವಿದರಾದ ಪರಶುರಾಮ ಬಣಕಾರ, ಶಿವಕುಮಾರ ಜಾಧವ, ಲಿಂಗರಾಜ ಕೊಳಜಿ, ಗುಡ್ಡಪ್ಪ ಹಲಗೇರಿ, ರವಿ ನಲವಾಗಲ, ಬಸವರಾಜ ಕೊಳಜಿ, ಚಂದ್ರ​‍್ಪ ದೊಡ್ಡಮನಿ, ರಾಜು ಸೂರ್ವೆ, ಗಂಗಾ ಮೊಟೆಬೆನ್ನೂರ, ರೇಣುಕಾ ಮರಾಠೆ ಇವರು  ತಮ್ಮ ಜಾನಪದ ಕಲೆಯ ಮೂಲಕ ಜನರನ್ನು ರಂಜಿಸಿದರು. ಗ್ರಾಮದ ಹಿರಿಯರು ಮತ್ತು ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ